ಇದೇ ಅಂತರಂಗ ಶುದ್ದಿ
ಒಂದು ಕಡೆ ಗುರು ಬಸವಣ್ಣನವರನ್ನು ಕೂಡಲಸಂಗಮದೇವನ ಆರಾಧಕರನ್ನಾಗಿ ಮಾಡಿ, ಗುರು ಬಸವಣ್ಣನವರನ್ನು ಹಿಂದುತ್ವದಲ್ಲಿ ವೀರಶೈವದಲ್ಲಿ ಸಮಾಗಮ ಮಾಡಿ, ಕನ್ಹೇರಿ ಸ್ವಾಮಿಯವರ ಬಸವಾದಿ ಶರಣರ ಹಿಂದೂ ಸಮಾವೇಶದ ವಿರೋಧ ಮಾಡಿ ಬಸವ ಭಕ್ತರಿಗೆ ಮೋಸ ಮಾಡುತ್ತಿರುವವರ ಬಗ್ಗೆ ಎಚ್ಚರವಿರಲಿ. ಕನ್ಹೇರಿಯ ಕಾಡಸಿದ್ದೇಶ್ವರ ಸ್ವಾಮಿಯವರು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಮೂಲ ಕಾರಣ ಕರ್ತರಾದವರೆ ಅವರ ಬಸವ ಕಲ್ಯಾಣದ ಕಾರ್ಯಕ್ರಮವನ್ನು ವಿರೋಧಿಸುವ ನಾಟಕವಾಡುತ್ತಿರುವುದು ಬಸವ ಭಕ್ತರಿಗೆ ಮಾಡುತ್ತಿರುವ ಬಹುದೊಡ್ಡ ವಂಚನೆ. ಅರಿವುಳ್ಳ ಬಸವ ಭಕ್ತರು ಕನ್ಹೇರಿ ಕಾಡ ಸಿದ್ದೇಶ್ವರ ಸ್ವಾಮೀಜಿಯವರ ವಿರೋಧಿಸಿ ಸಮಯ ವ್ಯರ್ಥಮಾಡಯವ ಬದಲಿಗೆ. ತಮ್ಮ ತಮ್ಮ ಊರುಗಳಲ್ಲಿ ಗುರು ಬಸವಣ್ಣನವರ ತತ್ವಗಳನ್ನು ಗಟ್ಟಿಗೊಳಿಸಿ. ಇಷ್ಟಲಿಂಗದೀಕ್ಷೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಮಾಜದ ಎಲ್ಲಾ ಜನಾಂಗದವರಿಗೆ ಗುರು ಬಸವಣ್ಣನವರನ್ನು ತಲುಪಿಸುವ ಪ್ರಯತ್ನ ಮಾಡಿ. ಇದರಿಂದ ಗುರು ಬಸವಣ್ಣನವರ ತತ್ವಗಳನ್ನು ಉಳಿಸಬಹುದೇ ಹೊರತು ಕಾಡಸಿದ್ಧೇಶ್ವರ ಸ್ವಾಮಿಯನ್ನು ವಿರೋಧಿಸುವುದರಿಂದ ಅಲ್ಲ. ಕಾಡಸಿದ್ಧೇಶ್ವರ ಸ್ವಾಮಿಗಳು ಕೃಷಿಯಲ್ಲಿ ಸಾಧನೆ ಮಾಡಿರಬಹುದು ಆದರೆ ಅವರಿಗೆ ಗುರು ಬಸವಣ್ಣನವರ ತತ್ವಗಳ ಅರಿವಿನ ಕೊರತೆ ಇದೆ ಅರಿವುಳ್ಳವರು ಅವರಿಗೆ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಅರಿವಿಲ್ಲದವರಿಗೆ ಅರಿವುಳ್ಳವರು ಅರಿವನ್ನು ಕೊಡಬೇಕೆ ಹೊರತು ವಿರೋಧ ಪ್ರತಿಭಟನೆ ಸಲ್ಲ...