Posts

ಇಷ್ಟಲಿಂಗ ಪೂಜೆಯನ್ನು ಜಾತಿ ಮೀಸಲಾತಿ ಹೋರಾಟಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ

Image
  *ಇಷ್ಟಲಿಂಗ ಪೂಜೆಯನ್ನು ಜಾತಿ ಮೀಸಲಾತಿ ಹೋರಾಟಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ..* ಇಷ್ಟಲಿಂಗ ಇದು ಸಮಾನತೆಯ ಕುರುಹು.. ಅಂದ ಮೇಲೆ ಅಲ್ಲಿ ಪಂಚಮಸಾಲಿ, ಬಣಜಿಗ, ವೀರಶೈವ etc ಹೀಗೆ ಹಲವಾರು ಉಪ ಪಂಗಡಗಳ(ಜಾತಿಗಳ) ಭೇದವನ್ನು ಅಳಿಸಿ ಎಲ್ಲರನ್ನೂ ಲಿಂಗಾಯತ ಧರ್ಮಿಯರನ್ನಾಗಿ ಮಾಡಿದ್ದು ಇಷ್ಟಲಿಂಗ..  ಇದು ಜಾತಿಯ ಕುರುಹು ಅಲ್ಲ.. ಇದು ಧರ್ಮದ ಕುರುಹು... ಪೂಜ್ಯ ಮಾತೆಮಹಾದೇವಿಯವರು ಪ್ರಾರಂಭಿಸಿದ ಲಿಂಗಾಯತ ಧರ್ಮ ಹೋರಾಟವನ್ನು ಅವರು ಲಿಂಗೈಕ್ಯ ಆದ ಮೇಲೆ ಈ ರೀತಿ ದಾರಿ ತಪ್ಪಿಸುವುದು ಸರಿಯಲ್ಲ. ಎಲ್ಲಾ ಮಠಾಧೀಶರು ಇದನ್ನು ಮನವರಿಕೆ ಮಾಡಿಕೊಳ್ಳಬೇಕು... ಲಿಂಗಾಯತಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಿಸುವುದು ನಮ್ಮ ಪ್ರಥಮ ಆದ್ಯತೆ ಆಗಿರಬೇಕು.. ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ಆಮೇಲೆ ತಾನಾಗಿಯೇ ಸಿಗುತ್ತವೆ...  800 ವರ್ಷಗಳ ಕಾಲ ಲಿಂಗಾಯತವು ಒಂದು ಜಾತಿಯಾಗಿ ಉಳಿದು ಸಾಕಷ್ಟು ಅನ್ಯಾಯಕೊಳಗಾಗಿದೆ.. ಇನ್ನಾದರೂ ಇದಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಿಸಿ ನ್ಯಾಯ ಕೊಡಿಸುವ ಬದಲು ಮತ್ತೆ ಇದನ್ನು ಮತ್ತೆ ಜಾತಿ ಎಂಬ ಪಂಜರದೊಳಗೆ ಇಡುತ್ತೇವೆ ಎನ್ನುವುದು ಸರಿಯಲ್ಲ...  ಎಷ್ಟೇ ವರ್ಷಗಳು ಕಳೆದರೂ ಪರವಾಗಿಲ್ಲ... ಆದರೆ ನಮ್ಮ ಬೇಡಿಕೆ ಜೊತೆ ಕಾಂಪ್ರಮೈಜ್ ಆಗದೆ ಲಿಂಗಾಯತ ಧರ್ಮ ಹೋರಾಟವನ್ನು ಮಾತ್ರ ಮುಂದುವರೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ... 🙏🙏🙏 (- ಸಿದ್ಧವೀರ ಸಂಗಮದ)

ಕಲ್ಯಾಣದಲ್ಲಿ ಗುರು ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡ

Image
ಕಲ್ಯಾಣದಲ್ಲಿ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡನ್ನು ರುದ್ರಮುನಿ ಗವಿ ಬಸವಕಲ್ಯಾಣದ ಹತ್ತಿರ ಹಾಕಿದ್ದಾರೆ...ಬಸವರಾಜ ಸೇಡಂ  ಅವರು ಅದಕ್ಕೆ ಬೇಲೂರಿನ ಶಿವಕುಮಾರ ಶ್ರೀಗಳು ಸ್ಪಷ್ಟೀಕರಣ ಕೇಳಿದ್ದಾರೆ ಮತ್ತು ಬೋರ್ಡ್ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ. ಇಂಥ ತಪ್ಪು ಮಾಹಿತಿಯ ಬೊರ್ಡನ್ನು ಖಂಡಿಸುತ್ತಾ ಶರಣರು ಸಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ

Image
  ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ ಕೊಡಲಸಂಗಮದಲ್ಲಿ 2023, ಜನೆವರಿ ಯಲ್ಲಿ ನಡೆಯುತ್ತಿರು ಎರಡು ಶರಣಮೇಳದಲ್ಲಿ ಬಂದ ಶರಣರನ್ನು ಉದ್ದೇಶಿಸಿ ಮಾತನಾಡುತ್ತಾ.. ಪ್ರಸಾದ ಇಲ್ಲಿ ಮಾಡುತ್ತಾರೆ ಅಲ್ಲಿ ಕಾರ್ಯಕ್ರಮ ಭಾಗಿಯಾಗುತ್ತಾರೆ ಎಂಬ ಬಸವರಾಜ ಧನ್ನೊರ ಅವರ ಕೆಳಮಟ್ಟದ ಮಾತುಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ.  ಬಸವಾನುಯಾಯಿಗಳು ಕೊಡಲಸಂಗಮದಲ್ಲಿ ಹಣ ಕೊಟ್ಟು ರೊಂಮಗಳನ್ನು ಕಟ್ಟಿಸಿಕೊಂಡವರಲ್ಲಿ ಕೆಲವರಿಗೆ ರೊಂಮ ಬೀಗಳನ್ನು ಕೊಡದೆ  ಅಮಾನವಿಯವಾಗಿ ವರ್ತಿಸಿದ್ದಾರೆ - ಇಂಥಹ ಘಟನೆಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. ಪವಿತ್ರವಾದ ಶರಣಮೇಳದ ವೇದಿಕೆ, ಅವಹೆಳನಕಾರಿ ಮಾತುಗಳಿಂದ, ಟಿಕೆಗಳಿಂದ ತುಂಬಿರುವುದನ್ನು ಕಂಡು ಬಸವಾನುಯಾಯಿಗಳು ನೊಂದಿದ್ದಾರೆ . ಪವಿತ್ರವಾದ ವೇದಿಕೆ ಧರ್ಮಪ್ರಚಾರಕ್ಕೆ ಮಾತ್ರ ಉಪಯೊಗಿಸಿಕೊಳ್ಳಿ. ಪೂಜ್ಯ ಚನ್ನಬಸವಾನಂದ ಸ್ಮಾಮಿಜಿಯರ ಸ್ಪಷ್ಟಿಕರಣ

ಮಾತಾಜಿಯವರು ವಚನಾಂಕಿತವನ್ನು ಹಿಂದಕ್ಕೆ ನಿಜವಾಗಿಯು ತೆಗೆದುಕೊಂಡಿದ್ದರೆ

 ಒಂದೆ ವಾಕ್ಯದಲ್ಲಿ ಹೆಳಬೆಕಾದರೆ "ಇಲ್ಲಾ"

ಗಂಗಾ ಮಾತಾಜಿ ವಿವಾದಾತ್ಮಕ ಹೆಳಿಕೆ

Image
 ದಿನಾಂಕ 28th December 2021 ವಚನಾಂಕಿತ ಲಿಂಗದೇವ ಹಿಂದಕ್ಕೆ ಪಡೆದ ಕೊಡಲಸಂಗಮದ ಬಸವ ಧರ್ಮ ಪಿಠದ ಅಧ್ಯಕ್ಷರಾದ ಗಂಗಾಮಾತಾಜಿ. ಬಸವ ಅಭಿಮಾನಿಗಳು ಹಾಗು ಮಾತೆ ಮಹಾದೇವಿ ಅಭಿಮಾನಿಗಳಿಂದ ತಿವ್ರ ವಿರೋಧ.