ಗಂಗಾ ಮಾತಾಜಿ ವಿವಾದಾತ್ಮಕ ಹೆಳಿಕೆ

 ದಿನಾಂಕ 28th December 2021

ವಚನಾಂಕಿತ ಲಿಂಗದೇವ ಹಿಂದಕ್ಕೆ ಪಡೆದ ಕೊಡಲಸಂಗಮದ ಬಸವ ಧರ್ಮ ಪಿಠದ ಅಧ್ಯಕ್ಷರಾದ ಗಂಗಾಮಾತಾಜಿ.

ಬಸವ ಅಭಿಮಾನಿಗಳು ಹಾಗು ಮಾತೆ ಮಹಾದೇವಿ ಅಭಿಮಾನಿಗಳಿಂದ ತಿವ್ರ ವಿರೋಧ.


31

*Press Conference 5*

ಒಂದು ಪಿಠಕ್ಕೆ ಪದಾಧಿಕಾರಿ ಆಯ್ಕೆ ಮಾಡುವಾಗ, *ಮೌಲ್ಯ ಮಾಪನ ಮಾಡದೆ* ಆಯ್ಕೆ ಮಾಡಿದ್ದರೆ, ಧರ್ಮದ ಮಾರ್ಗದಲ್ಲಿ ಎಡವಟ್ಟುಗಳು, ಕಟ್ಟಿಟ್ಟ ಬುತ್ತಿ. 

ಮೆಲನೊಟಕ್ಕೆ *ಭಕ್ತರಂತೆ ಕಂಡರು* ಪರಿಕ್ಷಿಸಿ ಪದಾಧಿಕಾರಿ ಮಾಡುವುದು ಉತ್ತಮ.

Current situation is the best example.

- ವಿಶ್ವನಾಥ ಕೋರೆ.

_-------++++------+-------------------+-++-------
30

ಕಾಲಜ್ಞಾನ ವಚನ:
(ಯಾರೋ ಕಳಿಸಿದ್ದು)
*ಹತ್ತು ತಲೆಯ ನಾರಿ ಬಂದು ಧರೆಯನಾಳುತ್ತಾಳೆ ಕಣಿಯ ಕೇಳಿರೋ*
*ಹತ್ತು ತಲೆಯ ನಾರಿಯನ್ನು ಸಂಹರಿಸಿ ಪರತಲೆಯ ನಾರಿ ಬಂದು ಧರೆಯನಾಳುತ್ತಾಳೆ ಕಣಿಯ ಕೇಳಿರೋ*
*ಪರತಲೆಯ ನಾರಿಯನ್ನು ಸಂಹರಿಸಿ ತಲೆಯಿಲ್ಲದ ಅಯೋಗ್ಯ ಸಲಿಂಗರತಿಯ ರಾಜ ಬಂದು ಧರೆಯನ್ನಾಳುತ್ತಾನೆ ಕಣಿಯ ಕೇಳಿರೋ*

ವಿವರಣೆ: ಹತ್ತು ತಲೆ ಅಂದುರ ಎಲ್ಯಾರ ಹತ್ತು ತಲಿ ಅವಾ ಅಂತ ತಿಳಕೊಂಡೀರಿ ಹಂಗಲ್ಲ.. ಹತ್ತ್ ತಲ್ಯಾಗ ಇದ್ದೊಷ್ಟು ಬುದ್ಧಿ ಒಬ್ಬ ನಾರಿ ತಲ್ಯಾಗ ಇರ್ತದ.

ಪರ ತಲೆಯ ನಾರಿ ಅಂದರ ಬೇರೇರ ತಲಿ ತಂದು ಆರೇಷನ್ ಮಾಡಿ ಹಚ್ಚಿ ಕೊಂಡಿರೋ ತಲಿ ಅಂತ ತಿಳಕೊಂಡೀರಿ ಎಲ್ಯಾರಾ..   ಹಂಗಲ್ಲ ಅದು....! ಅದ್ಯಾಂಗ ಅಂದರ... ಹತ್ತು ತಲೆಯ ನಾರಿ ಕೊಟ್ಟ ಬುದ್ದಿ ರೊಕ್ಕಕ್ಕ ಮಾರಿ, ಅಂದುರ ಹತ್ತು ತಲಿಯನ್ನು ಕೊಯ್ದಾಕಿ, ಮೂರು ತಲಿಯಿಂದ ತಕ್ಕೊಂಡಿರೋ ಬುದ್ದಿಯಿಂದ ಧರೆಯನಾಳುತ್ತಾಳೆ ಕಣಿಯ ಕೇಳಿರೋ..ಅಂತ ಅರಥಾ.

ಇನ್ನ.. ಪರತಲೆಯ ನಾರಿಯನ್ನು ಸಂಹರಿಸಿ ತಲೆಯಿಲ್ಲದ ಅಯೋಗ್ಯ ಸಲಿಂಗರತಿಯ ರಾಜ ಬಂದು ಧರೆಯನ್ನಾಳುತ್ತಾನೆ ಕಣಿಯ ಕೇಳಿರೋ ಅಂದುರ ಏನ ಅರ್ಥ. 
ಈ ಮೂರ್ ತಲಿಯಿಂದ ತಕ್ಕೊಂಡಿರೋ ಬುದ್ದಿಯೇನು ನೂರ್ ವರುಷತಖ ಏನ್ ಇರಲ್ಲ.. ಅದಕ್ಕ ಪರತಲಿಯ ನಾರಿಯನ್ನು  ಮೂಲೆಗುಂಪು ಮಾಡಿ ಸಾಯದ್ಕಿಂತ ಮುಂಚೇನೆ ಕೊಲ್ಲಾಕಿ, ತಲೆಯಿಲ್ಲದ ರಾಜ ಬಂದು ಧರೆಯನಾಳುತ್ತಾನೆ ಕಣಿಯ ಕೇಳಿರೋ..

ತಲಿಯಿಲ್ಲದ ಸಲಿಂಗ ರತಿಯ ರಾಜ ಅಂದರ್... ಧರ್ಮ ಜ್ಞಾನ ಇಲ್ಲದ, ಯಾರ್ ಜೊತಿ ಕಾಮಾದಾಟ ಆಡಬೇಕು ಅಂತನೂ ಗೊತ್ತಿಲ್ಲದ, ವಿಧವೆಯರಿಗೆ  ಬಡ ಹೆಂಗಸರಿಗೆ ಅಕ್ಕಿ ಜೋಳ ಕೊಟ್ಟು ಅವರ ಜೊತಿ ಕಾಮದಾಟ ಆಡಿ, ಅದರ ಜೊತಿ ಸಣ್ಣ್ ಸಣ್ಣ್ ಮಕ್ಕಳು (ಗಂಡು ಮಕ್ಕಳು)ಇರುವಾಗಿನಿಂದ ಅವರಿಗೆ ಆಟದ ಸಾಮಾನ್ ತಿಂಡಿ ಪೊಟ್ಟಣ ಕೊಟ್ಟು ಅವರ ಸರಿ ಕಾಮದ ಆಟ ಆಡಿ, ದೊಡ್ಡವರಾಗಿ ಎದುರು ನಿಂತಾಗ ತನ್ನ ರಾಜ್ಯದ ಸಂಪತ್ತನ್ನೇ ಕೊಟ್ಟು ಅವರನ್ನೇ ತಾನು ಸಾಕಿದ ನಾಯಿ ಬಿಟ್ಟು ಮುಂದೊಂದು ದಿನ ಅವರನ್ನ ಕೊಂದ್ಹಾಕಿ ರಾಜ್ಯವಾಳುತ್ತಾನೆ ಕಣಿಯ ಕೇಳಿರೋ ಅಂತ ಅರ್ಥ. 
ಇನ್ನ ಆ ರಾಜ ಹೆಂಗ ಅಳದು ಹೋಗ್ತಾನ ಅಂತ ಕಾಲಜ್ಞಾನದಲ್ಲಿ ಹೇಳಿಲ್ಲ ಯಾಕಂದರ್ ಇದು ಕಲಿ ಕಾಲ ಸ್ವಾಮಿ.!!!!

-------+----------+--------+-----------------
29


ರಾಷ್ಟ್ರೀಯ ಅಧ್ಯಕ್ಷರೇ,
ಇದೆ ಮಾತನ್ನು ಪೂಜ್ಯ ಮಾತಾಜಿಯವರು ಜೀವಂತ ಇದ್ದಾಗಲೇ ಹೇಳಬೇಕಿತ್ತು.. ನಿಮ್ಮ ಮಾತಿಗೆ ಬೆಲೆ ಇರುತ್ತಿತ್ತು...

ಆವಾಗ ಮೌನ ವಹಿಸಿ, ಮಾತಾಜಿ ಲಿಂಗೈಕ್ಯ ಆದ ನಂತರ ತನ್ನ ನಿಜ ಬಣ್ಣ ತೋರಿಸಿ ಲಿಂಗದೇವ ತಪ್ಪು ಎಂದು ವಾದ ಮಾಡಲು ಪ್ರಾರಂಭಿಸಿದ್ದು ಏಕೆ?.?

ದೆಹಲಿಯ ತಾಲಕಟೋರ ಸ್ಟೇಡಿಯಂ ನಲ್ಲಿ ತಾವು ಭಾಷಣದ ಮಧ್ಯದಲ್ಲಿ  ಲಿಂಗದೇವ ಪದ ಜೋರಾಗಿ ಬಳಸಿದಾಗ ಎಲ್ಲಾ ಶರಣರು ಚಪ್ಪಾಳೆ ತಟ್ಟಿದರು. ಪೂಜ್ಯ ಲಿಂಗೈಕ್ಯ ಮಾತಾಜಿಯವರ ಮುಖದ ಮೇಲೆ ಸಂತೋಷದ ನಗೆ ಕಂಡುಬಂತು. ಮಾತಾಜಿಯವರ ವಿಶ್ವಾಸ ಗೆದ್ದು ಈ ಸಂಸ್ಥೆಯಲ್ಲಿ ಸ್ಥಾನ ಪಡೆದುಕೊಳ್ಳುವ ಸಲುವಾಗಿ ಈ ರೀತಿ ಮಾಡಿದ್ದೀರಾ?

ಪೂಜ್ಯ ಲಿಂಗೈಕ್ಯ ಮಾತಾಜಿಯವರು ಮನಸ್ಸು ಮಾಡಿದರೆ ಲಿಂಗದೇವ ವಚನಾಂಕಿತ ಬಳಸುವವರನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು ಆದರೆ ವಿಶಾಲ ಹೃದಯಿಯಾಗಿರುವ ಮಾತಾಜಿಯವರು ವಚನಾಂಕಿತ ಯಾವುದಾದರೂ ಬಳಸಲಿ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕಾಗಿ ದುಡಿಯುವಿರಿ ಎಂಬ ವಿಶ್ವಾಸದಿಂದ  ತಮ್ಮನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವಂತೆ ಕೆಲವರು ಮಾಡಿದ ಮನವಿಗೆ ಅನುಮೋದನೆ ಕೊಟ್ಟರು.

ಆದರೆ, ತಾವು ಮಾತಾಜಿ ಲಿಂಗೈಕ್ಯವಾದ ಕೆಲವು ದಿನಗಳ ನಂತರವೇ ಲಿಂಗದೇವ ವಚನಾಂಕಿತ ವಿರೋಧಿಸಲು ಪ್ರಾರಂಭಿಸಿ,  ಸಂಘಟನೆಯನ್ನು ಬಲಪಡಿಸುವ ಬದಲು ಅದೇ ಸಂಘಟನೆಯನ್ನು ಒಡೆಯಲು ಶುರು ಮಾಡಿದಿರಿ.

ಲಿಂಗದೇವ ತೆಗೆದು ಹಾಕಬೇಕು ಎಂಬ ಒಂದೇ ಗುರಿಯನ್ನು ಇಟ್ಟುಕೊಂಡು 3 ವರ್ಷಗಳ ಕಾಲ ಅದನ್ನೇ ಪ್ರಯತ್ನ ಮಾಡಿ ಕೊನೆಗೂ ಯಶಸ್ವಿಯಾಗಿಬಿಟ್ಟಿರಿ... ತಾವು ಹೀಗೆ ಮಾಡಿದ್ದು ಯಾವ ಸ್ವಾರ್ಥ ಸಾಧನೆಗಾಗಿ?

ತಾಯಿ (ಪೂಜ್ಯ ಶ್ರೀ ಜಗದ್ಗುರು ಲಿಂ *ಮಾತೆ ಮಹಾದೇವಿ*) ನಂಬಿ ಕೊಟ್ಟ ಪದವಿಯನ್ನು ಬಳಸಿ, ಆ ತಾಯಿಯ ಜಿವ ವಾಗಿದ್ದ ಲಿಂಗದೇವ ತೆಗೆದಾಗ, ನಿಮ್ಮ  ನಗುವಿನಿಂದ ಮೊತೊಂಮ್ಮೆ ಆ ತಾಯಿಯನ್ನು ಆತ್ಮಕ್ಕೆ ಹಿಂಸೆಯನ್ನು ಕೊಟ್ಟಿದ್ದೀರಿ..😔

*ನುಡಿಯಲ್ಲಿ ಎಚ್ಚೆತ್ತು, ನಡೆಯಲ್ಲಿ ತಪ್ಪಿದಡೆ ಹಿಡಿದಿರ್ಪ ಲಿಂಗವು ಘಟಸರ್ಪ ನೋಡಾ..*

*ಶರಣರ ನೋವು... ಲಿಂಗದ ನೋವು...*

--+++++++-------------------

28
*Press Conference 4*

*ಇನ್ನುಮುಂದೆ ನಾನು ಇವರಿಗೆ ಪಾದ ಮೊಟ್ಟಿ ನಮಸ್ಕರಿಸುವುದಿಲ್ಲಾ* ನಮಸ್ಕರಿಸಿದರೆ, ನನ್ನ ದಿಕ್ಷಾಗುರುವಿಗೆ (ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ ಯವರಿಗೆ) ನಾನು *ದ್ರೊಹ* ಮಾಡಿದಂತೆ. 

- ವಿಶ್ವನಾಥ ಕೋರೆ

---------------------+++-----------------------------------------
27

*Press conference 3*

ಅಮೊಲ್ಯ ರತ್ನ ಸಿಕ್ಕಿತಮ್ಮ , *ಈ ಹಾಡು, Permanently Ban* by 
ಇಂದಿನ ಪಿಠಾ ಅಧ್ಯಕ್ಷರಿಂದ.
--------------------+++-----------------------------------------
26

*Press conference 2*

- ವಿಶ್ವನಾಥ ಕೋರೆ : ಗಂಗಾ ಮಾತಾಜಿ, ಲಿಂಗದೇವ ಹಿಂದಕ್ಕೆ ತೆಗೆದು ಕೊಂಡಿದ್ದಾರೆ, *ಸರಕಾರದ ಆದೇಶ ವಂತೆ* ಮಾತಾಜಿ ನಿವು ಇದಕ್ಕೆ ಎನಂತಿರಾ.

- ಪೂಜ್ಯ ಶ್ರೀ ಜಗದ್ಗುರು ಮಾತೆ ಮಾಹಾದೇವಿಯವರ ಉತ್ತರ 👆🏼

--------------------+++-----------------------------------------
25

*Press conference 1*

*ಸಾವಿನಲ್ಲು ಲಿಂಗದೇವ ಬಿಡಲಿಲ್ಲಾ,* ಇನ್ನು ಈ ತತ್ವ ಭ್ರಷ್ಟರಿಗೆ, ವಚನಾಂಕಿತ change ಮಾಡಲು ಬರೆದು ಕುಡಲು ಹೆಗೆ ಸಾದ್ಯ??

ಕಟ್ಟುಕಥೆ, 
ಪ್ರಾಚಾರದ ವ್ಯಾಮೊಹ
ಗುರು ದ್ರೊಹ
ಭಕ್ತರಗೆ ಮೊಸ

ನಿಮಗೆ *ನಾಯಕ ನರಕ ತಪ್ಪದು*

- ವಿಶ್ವನಾಥ ಕೋರೆ


--------------------+++-----------------------------------------
 24

*ಯಾರು ಗುರು ಬಸವ ದ್ರೋಹಿಗಳು?? ಯಾರು ಧರ್ಮ ದ್ರೋಹಿಗಳು ಯಾರು ಅಪರಾಧಿಗಳು???*

*ಶತಮಾನಗಳ ಕಾಲದಿಂದ ಗುರು ಬಸವಣ್ಣನವರನ್ನು ಎತ್ತಿನ ಮೂರ್ತಿಯಾಗಿ ಮಾಡಿದವರು ಅಪರಾಧಿಗಳು ಗುರು ಬಸವ ದ್ರೋಹಿಗಳು.*

*ಶತಮಾನಗಳ ಕಾಲದಿಂದ ಗುರು ಬಸವಣ್ಣನವರಿಗೆ ಕುಂಕುಮ ಕಸ್ತೂರಿಯಿಂದ ಪೂಸಿದವರು ಅಪರಾಧಿಗಳು ಗುರು ಬಸವ ದ್ರೋಹಿಗಳು.*

 *ಶತಮಾನಗಳ ಕಾಲದಿಂದ ಗುರು ಬಸವಣ್ಣನವರನ್ನು ಗುರುವಲ್ಲ ಭಕ್ತ ಎನ್ನುವವರು ಅಪರಾಧಿಗಳು ಗುರು ಬಸವ ದ್ರೋಹಿಗಳು.* 

*ಶತಮಾನಗಳ ಕಾಲ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಬಸವ ಕಲ್ಯಾಣದ ಪುರುಷ ಕಟ್ಟೆಯ ಮೇಲಿನ ಎತ್ತಿನ ಮೂರ್ತಿಯನ್ನು ಇಂದಿಗೂ ಪೂಜಿಸುತ್ತ ಅದನ್ನು ತೆಗೆದು ಗುರು ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಲು ಯೋಗ್ಯತೆ ಇಲ್ಲದವರು ಅಪರಾಧಿಗಳು, ಗುರು ಬಸವ ದ್ರೋಹಿಗಳು ಧರ್ಮ ದ್ರೋಹಿಗಳು*

*ಗುರು ಬಸವಣ್ಣನವರ ಐಕ್ಯಮಂಟಪದ‌ ಮೇಲೆ ಸ್ಥಾವರ ಲಿಂಗ ಪ್ರತಿಷ್ಠಾಪಿಸಿದವರು  ಬಸವದ್ರೋಹಿಗಳು ಕುಬ್ಜ ಮನಸ್ಸಿನವರು ಅಪರಾಧಿಗಳು"

*ಗುರು ಬಸವಣ್ಣನವರನ್ನು ಲಿಂಗಾಯತ ಧರ್ಮಗುರುವೆಂದು ಸಾರಿ ಅವರಿಗೆ ವಿಶ್ವಗುರುವಿನ‌ ಪಟ್ಟ ಕಟ್ಟಿ ಅವರು ಕೂಡಲ ಸಂಗಮದೇವನ ಪೂಜಕರಲ್ಲ ಲಿಂಗದೇವನ ಪೂಜಕರು ಎಂದು ಅವರ ವಚನಗಳಲ್ಲಿ ಲಿಂಗದೇವ ವಚನಾಂಕಿತವಿಟ್ಟು ಗುರು ಬಸವಣ್ಣನವರನ್ನು ಜಾಗತಿಕ ಧರ್ಮಗುರುಗಳ ಸಾಲಿನಲ್ಲಿ ನಿಲ್ಲಿಸಿದ ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಹೇಗೆ ಅಪರಾಧಿಗಳಾಗುತ್ತಾರೆ?? ಹೇಗೆ ಧರ್ಮ ದ್ರೋಹಿಗಳಾಗುತ್ತಾರೆ?? ಹೇಗೆ ಗುರು ಬಸವ ದ್ರೋಹಿಗಳಾಗುತ್ತಾರೆ???* 

*ಅವರು ಲಿಂಗೈಕ್ಯರಾದ ಮೇಲೂ ಅವರನ್ನು  ಅಪರಾಧಿ ಸ್ಥಾನದಲ್ಲಿ ನೋಡುವವರಿಗೆ ಬಸವದ್ರೋಹಿ ಪಟ್ಟ ಕಟ್ಟುವವರಿಗೆ ಕನಿಷ್ಠ ಮನುಷ್ಯನ ಗುಣಗಳಾದರೂ ಇವೆಯೇ ಆತ್ಮವಾಲೋಕನ ಮಾಡಿಕೊಳ್ಳಿ*

*ಮಾತಾಜಿವರಿಗಿ ಗುರು ಬಸವ ದ್ರೋಹಿ ಎಂದು ಪಟ್ಟ ಕಟ್ಟಿದವರು ಅವರು ಲಿಂಗೈಕ್ಯರಾದ್ರೋಹಿಗಳು ದ್ವೇಷದ ಜ್ವಾಲೆ ಆರಿಸಿಕೊಳ್ಳಲಾರದವರು ನಿಜವಾದ ಗುರು ಬಸವ ದ್ರೋಹಿಗಳು ಅಪರಾಧಿಗಳು. ಗುರು ಗಂಗಾಮಾತಾಜಿವರನ್ನು ನುಂಗಿಹಾಕಿದ ಗೋಮುಖ ವ್ಯಾಘ್ರಗಳು ಅಪರಾಧಿಗಳು ಸಂಘಟನೆ ದ್ರೋಹಿಗಳು ಧರ್ಮದ್ರೋಹಿಗಳು ಅಪರಾಧಿಗಳು!!!!*

*ಲಿಂಗದೇವನ್ನು ಕಿತ್ತೊಗೆಯಬೇಕೆನ್ನುವವರು ಪರುಷ ಕಟ್ಟೆಯ ಮೇಲಿನ ಎತ್ತಿನ‌ ಮೂರ್ತಿ ಕಿತ್ತೊಗೆದು ತೋರಿರೋ...!*

*ಗುರು ಬಸವಣ್ಣನವರ ಐಕ್ಯಮಂಟಪ ಮೇಲಿರುವ ಸ್ಥಾವರ ಲಿಂಗ ತೆಗೆದು ತೋರಿರೋ...!*
*ಸಂಗಮೇಶ್ವರ ದೇವಸ್ಥಾನದಲ್ಲಿರುವ ಗಣಪನ ಮೂರ್ತಿ ತೆಗೆದು ತೋರಿರೋ...!!*

*ನಿಮ್ಮ ಮಠದ ದ್ವಾರದಲ್ಲಿರುವ ಎತ್ತುಗಳ ಮೂರ್ತಿಯನ್ನು ಕಿತ್ತೊಗೆದು ತೋರಿರೋ...!!!* ಇವೆಲ್ಲ ಕಿತ್ತಿ ಹಾಕದೆ ಲಿಂಗದೇವ ವಚನಾಂಕಿತ ಕಿತ್ತುಹಾಕಿದರೆ ಅದು ಬರುದೊರೆ ಕಾಣಿರೋ, ಇದು ನಿಮ್ಮ ದ್ವೇಷದ ಜ್ವಾಲೆಯ ಕಿಚ್ಚು ಕಾಣಿರೋ..*

-ಸಚ್ಚಿದಾನಂದ ಚಟ್ನಳ್ಳಿ

--------------------+++-----------------------------------------
23
*ಪೂಜ್ಯ ಗಂಗಾ ಮಾತಾಜಿ ಆತುರದಿಂದ ಪತ್ರಿಕಾ ಗೋಷ್ಟಿ ಯಾರಿಗೆ ಸಂತೋಷ ಪಡಿಸಲು ಮಾಡಿದರು ಅನ್ನೋದು ಅರ್ಥ ಆಗುತ್ತಿಲ್ಲ.* 

ಪತ್ರಿಕಾ ಗೋಷ್ಟಿಯಲ್ಲಿ ಲಿಂಗದೇವ ಬಗೆ  ಸ್ಪಷ್ಟಪಡಿಸಿಯು ಇಲ್ಲ. ಕೇವಲ ಅಂಕಿತನಾಮ ಬಗ್ಗೆ ಹೇಳಿದ್ದಾರೆ, ಆದರೆ ಮಾತಾಜಿ ಸಂಶೋಧನೆ ಮಾಡಿ ಲಿಂಗಾಯತ ದೇವರ ಹೆಸರು ಲಿಂಗದೇವರು ಎಂದು ಸ್ಪಷ್ಟಪಡಿಸಿದ್ದಾರೆ, ನೂರಾರು ವರ್ಷದಿಂದ ಲಿಂಗಾಯತರು ದೇವರ ಹೆಸರು ಗೊತ್ತಿಲ್ಲದೆ ಪೂಜೆ ಆಚರಣೆ ಮಾಡಿದ್ದಾರೆ. *ಹಾಗಂತ ಗೌರ್ವಾನಿತ ನ್ಯಾಯಾಲಯ ಮಾತಾಜಿ ಸಂಶೋಧನೆ ಅಥವಾ ದೇವರು ಲಿಂಗದೇವರು ಅಲ್ಲ ಎಂದು ಹೇಳಿಲ್ಲ. ಸರಕಾರ ನಿಲುವು ಅಂದರೆ " ವಚನಾಂಕಿತ ತಿದ್ದಿದದರಿಂದ ಸಮಾಜದಲ್ಲಿ ಗೊಂದಲ ಆಗಿ ಕಾನೂನು ಸುವವಸ್ಥೆ ಹಾಳಾಗುತ್ತೆ, ಅದಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕಾಯಿತು " ಎನ್ನುವ ನಿಲುವು ಎತ್ತಿ ಹಿಡಿದಿದೆ. ಗಂಗಾ ಮಾತಾಜಿಯವರು ಒತ್ತಡದಲ್ಲಿ ಪತ್ರಿಕಾ ಗೋಷ್ಟಿ ಕರೆದಿದ್ದು ಸ್ಪಷ್ಟವಾಗಿದೆ. ಎಲ್ಲರಿಗೂ ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡರೆ ಯಾವುದೇ ತೊಂದರೆ ಆಗುತ್ತಾ ಇದ್ದಿಲ್ಲ. ಇಲ್ಲಿ ಮಾತಾಜಿ ಯವರ ಸೇವೆಗೆ ಚುತಿ ತರಲ್ಲಾಗಿದೆ. ಮಾತಾಜಿ ಸಮಾಜದಲ್ಲಿ ತಪ್ಪಿತಸ್ತರು ಎಂದು ಪ್ರತಿಬಿಂಬಿಸಿದ್ದಾರೆ, ಮಾತಾಜಿ ಸೇವೆಗೆ ದೊಡ್ಡ ಅಪಮಾನ ಆಗಿದೆ.*

*ಈಗಾಗಲೇ ಮಾತಾಜಿ ನ್ಯಾಯಾಲಯ ತೀರ್ಪಿಗೆ ಗೌರವ ಕೊಡುತ್ತೇನೆ ಎಂದು ಹೇಳಿದರು, ಅದರಂತೆ ಅವರು ಕಲ್ಯಾಣ ಕಿರಣ ಮಾಸಿಕ ಪತ್ರಿಕೆಯಲ್ಲಿ ಕೂಡಲಸಂಗಮದೇವ ವಚನಾಂಕಿತ ಬಳಸಿದರು*. ಮತ್ತೆ ಸಂಸ್ಥೆಯ ಕೆಲವು ಜನ ಲಿಂಗದೇವರು ಎಂದು ಬಳಸಿ ಗೊಂದಲ ಮಾಡಿದರು. *ತಮ್ಮ ಸಂಸ್ಥೆಯಲ್ಲಿಯ ಗೊಂದಲ ಸರಿಪಡಿಸಬೇಕಾಗಿತ್ತು , ತಮ್ಮ ಮಾಸ ಪತ್ರಿಕೆಯಲ್ಲಿ ಆಗಲಿ ಅಥವಾ ಪ್ರಕಟಿಸುವ ಪುಸ್ತಕಗಳಲ್ಲಿ ಕೂಡಲಸಂಗಮದೇವ ಬಳಸಲು ಸೂಚಿಸಬಹುದಿತ್ತು. ಅದನ್ನು ಬಿಟ್ಟು ಲಿಂಗದೇವರು ಮಾತಾಜಿ ಪ್ರಮಾದದಿಂದ ಲಿಂಗಾಯತ ಸ್ವಾತಂತ್ರ್ಯ ಧರ್ಮ ಹೋರಾಟಕ್ಕೆ ಹಿನ್ನಡೆ ಆಗುತ್ತಾ ಇದೆ ಎಂದು ಆಪಾದಿಸಿದ್ದು, ಮಾತಾಜಿಯವರಿಗೆ ಮಾಡಿದ ದೊಡ್ಡ ಅಪಮಾನ.*

ಲಿಂಗಾಯತ ಧರ್ಮ ಸ್ವಾತಂತ್ರ ಧರ್ಮ ಎಂದು ಸಾಬೀತುಪಡಿಸಿದ್ದೆ ಮಾತಾಜಿ. ದಶಕಗಳಿಂದ ಮಾತಾಜಿ ಲಿಂಗಾಯತ ಧರ್ಮ ಮಾನ್ಯತೆ ಸಲುವಾಗಿ ತನು ಮನ ಧನ ದಿಂದ ಹೋರಾಟ ಮಾಡುತ್ತಾ ಇದ್ದಾರೆ. ಮಾತಾಜಿ ಜೊತೆಗೂಡಿ ನಾವು ಸುಮಾರು ಎರಡು ದಶಕದಿಂದ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಮಾಡುತ್ತಾ ಇದ್ದೇವೆ. ೨೦೧೫ ರಲ್ಲಿ ಬೆಂಗಳೂರು  ಸ್ವಾತಂತ್ರ್ಯ ಉದ್ಧ್ಯಾನ ದಲ್ಲೀ ಸುಮಾರು ಹತ್ತು ಸಾವಿರ ಜನ ಸೇರಿ ಆಂದೋಲನ ಮಾಡಿದ್ದೆವು, ಆವಾಗ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಭೆ ಏರ್ಪಡಿಸಿದ್ದೆವು. ಅದರ ನಂತರ ಬೆಂಗಳೂರು ಟೌನ್ ಹಾಲ್ ಎದುರುಗಡೆ ಬೃಹತ ರಾಲಿ ಮಾಡಿದ್ದೆವು, ಸನ್ಮಾನ್ಯ ಶ್ರೀ ಸಿದ್ದರಮಯ್ಯನವರು ಅವರ ಸಂಪುಟ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸ್ವೀಕರಿಸಲು ಕಳಿಸಿದರು. ಅಂದಿನ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಕೂಡ ಮನವಿ ಸ್ವೀಕರಿಸಿ ಮಾತಾಡಿದರು. ಮಾತಾಜಿ ನೇತೃತ್ವದಲ್ಲಿ ಬೀದರದಲ್ಲಿ ಪ್ರಥಮ ಬೃಹತ ರಾಲಿ ನಡೆಯಿತು. ಈ ರಾಲಿ ಆಗುವವರೆಗೆ ಲಿಂಗಾಯತ ಸ್ವತಂತ್ರ ಧರ್ಮ ಅನ್ನೋದು ಬಹುತೇಕ ಪೂಜ್ಯ ಮಠಾಧೀಶರಿಗೆ ಮತ್ತು ಸ್ವಾಮೀಜಿಗಳಿಗೆ ಗೊತ್ತೇ ಇದ್ದಿಲ್ಲ. ಯಾವ ಸ್ವಾಮೀಜಿ ಮಠಾಧಿಪತಿ ಲಿಂಗಾಯತ ಧರ್ಮ ಮಾನ್ಯತೆ ಹೋರಾಟಕ್ಕೆ ಇಷ್ಟೊಂದು ಶ್ರಮ ಪಟ್ಟಿಲ್ಲ, ಧನ ಸಹಾಯ ಕೂಡ ಮಾಡಿಲ್ಲ. ಕೇವಲ ಹೋರಾಟದ ವೇದಿಕೆ ಮೇಲೆ ಉಪಸ್ಥಿತರಿದ್ದರು.

*ಮಾತಾಜಿ ನೇತೃತ್ವದಲ್ಲಿ ಹೋರಾಟ ತಾರ್ಕಿಕ ಅಂತ್ಯ ಕಂಡಿದ್ದು, ರಾಜ್ಯ ಸರ್ಕಾರ ಒಪ್ಪಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.ಲಿಂಗದೇವರು ಎಲ್ಲೂ ತೊಡಕ್ಕಾಗಿಲ್ಲ. ಆದರೆ ಇಂದು ಏಕಾಏಕಿ ತೊಡಕ್ಕಾಗಿದ್ದು ಹೇಗೆ?*
ಮಾತಾಜಿ ಲಿಂಗಾಯತ ಧರ್ಮದ ದೇವರ ಹೆಸರು ಲಿಂಗದೇವರು ಎಂದು ಹೇಳಿದ್ದು ಸತ್ಯ ಆಗಿದೆ, ಅವರ ಸಂಶೋಧನೆ 💯 ಕ್ಕೆ 💯 ಸತ್ಯ ಆಗಿದೆ. ಇಲ್ಲ ಅಂದರೆ ಪೂಜ್ಯ ಗಂಗಾ ಮಾತಾಜಿ ಮತ್ತು ಅವರಿಗೆ ಪ್ರಚೋದನೆ ಮಾಡಿದ್ದ ಸ್ವಾಮೀಜಿಗಳು ಮಠಾಧೀಶರು ಪದಾಧಿಕಾರಿಗಳು ಹೇಳಿ, ನಮ್ಮ ಲಿಂಗಾಯತ ಧರ್ಮದ ದೇವರು ಹೆಸರು ಏನು? ಸಂಶೋಧನೆ ಮಾಡಿ, ಬಸವಾದಿ ಶರಣರು ದೇವರಿಗೆ ಯಾವ ಹೆಸರಿನಿಂದ  ಕರೆದರೂ? 

*ಮಾತಾಜಿ ಜೀವಂತ ಇದ್ದಾಗ ವಿರೋಧ ಮಾಡುವ ಯಾವುದೇ ಶಕ್ತಿ ಯುಕ್ತಿ ಜ್ಞಾನ ಇಲ್ಲದವರು, ಅವರು ಐಕ್ಯ ಆದ ಮೇಲೆ, ಸಮಾಜದ ಮೇಲೆ ಇದ್ದ ಅವರ ಪ್ರಭಾವ ಕಡಿಮೆ ಮಾಡಲು ಮಾಡಿದ್ದ ಹುನ್ನಾರ ಅಷ್ಟೇ.*

 *ವಚನಾಂಕಿತ ನಾವು ಕೂಡ ಒಪ್ಪಿಲ್ಲ, ಆದರೆ ಅವರು ಲಿಂಗದೇವರು ಲಿಂಗಾಯತ ಧರ್ಮದ ಸೃಷ್ಟಿಕರ್ತ ದೇವರ ಹೆಸರು *ಲಿಂಗದೇವರು* ಎಂದು ಸಂಶೋಧನೆ ಮಾಡಿ ಸಮಾಜಕ್ಕೆ ಕೊಟ್ಟಿದ್ದು ಎಲ್ಲರೂ ಒಪ್ಪಿದ್ದೇವೆ . ಲಿಂಗಾಯತ ಧರ್ಮದ ಪ್ರತಿಯೊಬ್ಬರೂ ಲಿಂಗದೇವರು ಒಪ್ಪಲೇಬೇಕು, ಇದು ಮಾತಾಜಿ ಇಟ್ಟ ಹೆಸರಲ್ಲ , ಇದು ಬಸವಾದಿ ಶರಣರು ಸೃಷ್ಟಿಕರ್ತ ದೇವರಿಗೆ ಕೊಟ್ಟ ಹೆಸರು. 

*ವಚನಾಂಕಿತ ಬಳಸಬಾರದು ಎಂದು ಹೇಳಿ,* ಆದರೆ ದೇವರು ಸೃಷ್ಟಿಕರ್ತ ಹೆಸರು ಲಿಂಗದೇವರು ಒಪ್ಪಲೇಬೇಕು. *ಮಾತಾಜಿ ಸೇವೆ ಅಗಣ್ಯ, ಅವರ ಸೇವೆಗೆ ಮಸಿ ಬಳಿಯುವ ಯತ್ನವನ್ನು ಯಾರು ಮಾಡಬಾರದು. ತಮ್ಮ ಜೀವನ ತುಂಬಾ ಕಷ್ಟಪಟ್ಟು, ಈ ಶತಮಾನದಲ್ಲಿ ಬಸವ ತತ್ವ ಪ್ರಚಾರ ಮಾಡಿದ ಶತಮಾನದ ಲಿಂಗಾಯತ ಮಹಿಳಾ ನಾಯಕಿ. ಇದು ಎಲ್ಲರೂ ಒಪ್ಪಬೇಕು.*

 *ಗಂಗಾ ಮಾತಾಜಿ ಇಂದ ಪತ್ರಿಕಾ ಗೋಷ್ಟಿ ಮಾಡಿಸಿ ಸಂತೋಷ ಪಡುತ್ತಿರುವ ವಿಕೃತ ಮನಸ್ಸು ಗಳಿಗೆ ಒಂದು ಧಿಕ್ಕಾರ ಇರಲಿ.*

*ಶ್ರೀಕಾಂತ ಸ್ವಾಮಿ,* ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

--------------------+++-----------------------------------------
22

ಮುಂಬರುವ ಶರಣ ಮೇಳದಲ್ಲಿ ಧರ್ಮಗ್ರಂಥದ ಮೂಲಪ್ರತಿಯನ್ನು ಬಹಿರಂಗಗೊಳಿಸಬೇಕು...
ಏಕೆಂದರೆ ಇನ್ನೂ ಮುಂದೆ ಎಲ್ಲಾ ಶರಣರಿಗೆ ಬಸವ ಧರ್ಮ ಪೀಠದ ಇಂದಿನ ಅದ್ಯಕ್ಷರ ಮೆಲೆ ನಂಬಿಕೆ ಉಳಿದಿಲ್ಲ...

- ಸಿದ್ಧವೀರ ಸಂಗಮದ್

--------------------+++-----------------------------------------
21
ಎಲ್ಲಿದ್ದಿರಾ..
ಪದಾಧಿಕಾರಿಗಳೇ... 
ವಿದೆಕೆ ಸಿಧ್ಧ ಮಾಡಿ..

ಇಲ್ಲಾ,
ಯಲ್ಲಾ ಶರಣರನ್ನು ನಿರ್ಲಕ್ಷಿಸಿದಕ್ಕೆ,
ಬಹಿಷ್ಕಾರ ಹಾಕಿ, *ರಾಜಿನಾಮೆ ಕೊಡಿ*

ಇಲ್ಲಾ
ನಿವು ಹೆಳಿದ್ದೆ ನಮಗೆ ದಾರಿ ಅಂತ, ಪಿಠಧಿಕಾರಿಗಳೆಗೆ, ಬೆಂಬಲ ನಿಡಿ.

ಇಲ್ಲಾ
ಮಾತೆ ಮಹಾದೆ ಮಾಹಾದೇವಿ ತಾಯಿವರಿಗೆ, ಇದೆ ಸುಕ್ತ, ಕೊರ್ಟ ಆದೆಶವು ದರ್ಮಕಿಂತ ಮೆಲು‌ (ಹಾಗಿದ್ದಲ್ಲಿ, ನಿಮ್ಮ ಸಂಮತ್ತಿಯು, ಗುರು ಬಸವಣ್ಣನವರಿ ಗಡಿಪಾರು ಶಿಕ್ಷೆಯಾಗಿದ್ದೆ correct, ಅನ್ನುವುದಾಗಿರಬೆಕು)

ಇಲ್ಲಾ..
ಇನ್ನು ಮೊಂದೆ ಯಾವುದೆ ಹೊರಾಟದ ಕರೆಗೆ, ನಮ್ಮ ಕರೆಯ ಬೇಡಿ, ಪ್ರೆಸ ಮಿಟ ಮಾಡಿ (ಬಸವ ಭಕ್ತರ ಬೆಂಬಲವಿಲ್ಲಾ) ನಾವು ಸುಮ್ಮನೆ ಮನೆಯಲ್ಲಿ ಕುತು ಲಿಂಗ ಪೊಜೆ ಮಾಡಿಕೊಂಡು, ಬಸವ ಅಂತ ಇರುತ್ತೆವೆ.

*ಸುಮ್ಮನೆ ಕೊಡುವ ಸಮಯ ವಿದು ವಿಲ್ಲಾ.*

- ವಿಶ್ವನಾಥ ಕೋರೆ.

--------------------+++-----------------------------------------
20

ಹಿಗೆ ಬಿಟ್ಟರೆ
*ಧರ್ಮ ಗ್ರಂಥ*, 
ಮುರುಘಾ ಮಠಕ್ಕೆ, ಬಸವ ಧರ್ಮ ಪಿಠ, ಧರ್ಮ ಗ್ರಂಥ ಮಾರಿ, ಪ್ರೆಸ್ ಮಿಟ ಮಡಿದ್ದರು ಮಾಡಬಹುದು.

But

ನಾವು ಸುಮ್ಮನೆ ಕೊಡಬೆಕಾ ???

--------------------+++-----------------------------------------
 19

ರಾಷ್ಟ್ರೀಯ ಬಸವದಳದ ಶರಣರೇ ಎಚ್ಚರ

ಸ್ವತಂತ್ರ  ಲಿಂಗಾಯತ ಧರ್ಮದ ಹೋರಾಟಕ್ಕಾಗಿ ವಚನಾಂಕಿತ ವಾಪಸ್ಸು ಪಡೆಯಲಾಗಿದೆ ಎಂಬುದು ಕೇವಲ ನೆಪ ಮಾತ್ರ...

ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರು ಇತಿಹಾಸದಲ್ಲಿ ಜೀವಂತ ಇರುವುದು ತಮ್ಮ ಲಿಂಗದೇವ ಎಂಬ ಶ್ರೇಷ್ಠ ಸಂಶೋಧನೆಯಿಂದ ಮಾತ್ರ...

ಆ ಸಂಶೋಧನೆಯನ್ನೇ ಮರೆಮಾಚಿ ಪೂಜ್ಯ ಲಿಂಗೈಕ್ಯ ಮಾತಾಜಿ ಅವರನ್ನು ಇತಿಹಾಸದಿಂದ ಅಳಿಸಿಹಾಕುವ ಕುತಂತ್ರ ನಡೆದಿದೆ...

ಒಬ್ಬ ಕಳ್ಳನು ಮನೆ ಕಾಯುವ ನಾಯಿಗೆ ಬಿಸ್ಕಿಟ್ ತೋರಿಸಿ ಮನೆಯಲ್ಲಿರುವ ಬಂಗಾರ ಕದಿಯುವಂತೆ, ಕೆಲವು ಸ್ವಾರ್ಥಿಗಳು ಬಸವ ಭಕ್ತರಿಗೆ ಲಿಂಗಾಯತ ಧರ್ಮ ಹೋರಾಟ ಎಂಬ ಬಿಸ್ಕಿಟ್ ತೋರಿಸಿ, ಮರಳು ಮಾಡಿ ಲಿಂಗದೇವ ಎಂಬ ರತ್ನವನ್ನು ಮರೆಮಾಚಲಾಗುತ್ತಿದೆ..

- ಅನಾಮಿಕ

--------------------+++----------------ಅನಾಮಿಕ-------------------
18

ತಮ್ಮ ಜಿವನದಲ್ಲಿ ಯಾವುದೆ ಸಂಶೊಧನೆ ಇಲ್ಲಾ

ಸಂಶೊಧನೆ ಮಾಡಿ, ಲಿಂಗದೇವ ಗುರು ಕೊಟ್ಟು ತಿಳಿಸಿ ಹೆಳಿದರು, ಅದನ್ನು ತಮ್ಮ ಪ್ರಾಥನೆಯಲ್ಲಿ ಎಂದು ಹೆಳಿದವರಲ್ಲಾ, ವಚನಾಂಕಿತ ಬಂದಾಗ silent ಆಗಿಬಿಡುತ್ತಿದ್ದರು.

ಶರಣ ಮೇಳ ಮೊಗಿದ ತಕ್ಷಣ, ಧರ್ಮ ಪ್ರಚಾರಕ್ಕೆ ಹೊಗುತಿದ್ದವರು, ಯಂದೊ ತಮ್ಮ schedule ಮಿಸ್ ಮಾಡಿದವರಲ್ಲಾ.

ಶರಣಮೇಳ ಪ್ರಚಾರ ಬಿಟ್ಟು, 
Statement ಕೊಟ್ಟಿರುವುದಲ್ಲ..
*ಅವರಿಂದ ಆ statement ಕೊಡಿಸಲಾಗಿದೆ.*

ಸೂತ್ರಧಾರ ರಲ್ಲಿ ಎದುರಿಗೆ ಬಂದು statement ಕೊಡುವ ಧೈರ್ಯ ಇಲ್ಲಾ, ಕೊಟ್ಟವರಲ್ಲಿ ಲಿಂಗದೇವನ ಬಗ್ಗೆ ಒಲವಿಲ್ಲಾ.

ಒಂದು ಸಲಾ ಸೊತ್ರಧಾರ ಹೆಸರು ಬಯಲಿಗೆ ಬಂದ ಮೆಲೆ, *ಎಡ ಪಾದ ರಕ್ಷೆ ಯಿಂದ* ಲಟ ಲಟನೆ ಯಂತು ಖಂಡಿತ.

- ವಿಶ್ವನಾಥ ಕೋರೆ.

--------------------+++-----------------------------------------
17

14th November 
     ಮಕ್ಕಳ ದಿನ

15th October
 ವಿದ್ಯಾರ್ಥಿ ದಿನ

28th December
*ಗುರು ದ್ರೊಹ ದಿನ*

- ವಿಶ್ವನಾಥ ಕೋರೆ

--------------------+++-----------------------------------------
16

ಓಂ ಶ್ರೀಗುರು ಬಸವಲಿಂಗಾಯನಮಃ
ಬಸವ ಧರ್ಮ ಪೀಠದ ಅತ್ಯಂತ ಕಳಕಳಿಯುಳ್ಳ  ಭಕ್ತನಾದ ನಾನು,
 ಈ ಮೂಲಕ ನನ್ನ ಕಳಕಳಿಯ ಮನವಿಯನ್ನು ಬಸವ ಧರ್ಮ ಪೀಠಕ್ಕೆ ಸಲ್ಲಿಸುತ್ತಿದ್ದೇನೆ            ಪರಮಪೂಜ್ಯ  ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮದೇವ ವಚನಾಂಕಿತ ವನ್ನು ಬಳಸಬೇಕೆಂದು ಆದೇಶ ಮಾಡಿದ್ದಾರೆ. ಈ ಆದೇಶ ಪಾಲನೆ ಮಾಡುವಲ್ಲಿ ಪರಮಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಆದೇಶದ ಉಲ್ಲಂಘನೆಯಾಗುತ್ತದೆ ಹಾಗೂ ಗುರುದ್ರೋಹ ಮಾಡಿದಂತಾಗುತ್ತದೆ. ವಚನಾಂಕಿತ ವಿಷಯದಲ್ಲಿ ನಾವು ಪರಮಪೂಜ್ಯ ಮಾತೆ ಮಹಾದೇವಿಯವರ ಆಜ್ಞೆಯನ್ಮೇ ಪಾಲಿಸುತ್ತೇವೆ.  ಪೂಜ್ಯ ಗಂಗಾ ಮಾತಾಜಿಯವರ ಈ ಆದೇಶವನ್ನು, ಭಕ್ತಿ ಹಾಗು ಕಳಕಳಿಯಿಂದ ತಿರಸ್ಕರಿಸುತ್ತೇವೆ.
   ಶರಣು ಶರಣಾರ್ಥಿ.  🙏🙏🙏

- ವೀರೇಶ ಗಂಗೋತ್ರಿ

--------------------+++-----------------------------------------
15
*ಜಂಗಮ ಹೋದಮೇಲೆ ನಿಂದಿಸಬೇಡ* 
-ಗುರು ಬಸವಣ್ಣನವರು

ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ?
ಧರಧುರ ಭಕ್ತಿಯ ಮಾಡಲೇಕಯ್ಯಾ?
ನಿಂದಿಸಲೇಕೆ ಸ್ತುತಿಸಲೇಕೆ?
ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ
ಮೆಟ್ಟಿ ಹುಡಿಹೊಯ್ಯದೆ ಮಾಬನೆ?
ಆ ಜಂಗಮ ಹರನೆಂದು ನಂಬಿ ನರನೆಂದು ಭಾವಿಸಿದಡೆ ನರಕ ತಪ್ಪದು ಕಾಣಾ
ಕೂಡಲಸಂಗಮದೇವ.

ಲಿಂಗದೇವನ ಭಕ್ತರಾದ ಜಂಗಮರನ್ನು ಸ್ತುತಿ ಮಾಡಿದ ಬಳಿಕ ನಿಂದಿಸಬಾರದು. ಎತ್ತಿಕೊಂಡ ಬಳಿಕ ಕೆಳಗಿಳಿಸ ಬಾರದು.  ಧರಧುರದ ಭಕ್ತಿಯ ಮಾಡಕೇಕಯ್ಯಾ ಎಂದರೆ ಇಲ್ಲದ ಸದ್ಗುಣಗಳನ್ನು ಇವೆ ಎಂದು ಕಲ್ಪಿಸಿ ಹೊಗಳಬಾರದು ಮತ್ತು ಇಲ್ಲದ ದುರ್ಗುಣಗಳ ಆರೋಪಿಸಿ ತೆಗಳಬಾರದು.

ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ? ಎಂದರೆ, ಜಂಗಮ ಎದುರಿಗೆ ಇದ್ದಾಗ ಅವರನ್ನು ಪರಿಪರಿಯಾಗಿ ಹೊಗಳಿ ಅವರು ಹೋದಮೇಲೆ, ಮರೆಯಾದಮೇಲೆ, ಲಿಂಗೈಕ್ಯವಾದಮೇಲೆ ಅವರನ್ನು ತೆಗಳಬಾರದು ನಿಂದಿಸಬಾರದು. ಏನಾದರೂ ಅವರು ತಪ್ಪು ಮಾಡಿದ್ದಾರೆ ಎಂದು ಎನಿಸಿದರೆ ಅವರಿದ್ದಾಗ ಅವರ ಎದುರಿಗೆ ಅವರನ್ನು ನಿಂದಿಸಬೇಕು ಅವರು ಇಲ್ಲದಾಗ ನಿಂದಿಸಿದರೆ ಲಿಂಗದೇವರು ಮೆಟ್ಟಿ ಬಾಯಿಯಲ್ಲಿ ಕೆಸರು ಸುರಿಯುತ್ತಾನೆ ಆ ಜಂಗಮವೆನ್ನ ಪ್ರಾಣವೆಂದು ಭಾವಿಸಿ ಜಂಗಮವನ್ನು ದೇವರ ಸ್ವರೂಪ ಗುರು ಸ್ವರೂಪ ಎಂದು ನಂಬಿ ಅವರನ್ನು ಸಾಮಾನ್ಯ ಮಾನವ ಎಂದು ಜರಿದರೆ ನರಕ ತಪ್ಪದು ಕಾಣಾ ಲಿಂಗದೇವ ಎಂದು ಗುರುಬಸವಣ್ಣನವರು ಹೇಳುತ್ತಿದ್ದಾರೆ.
*-ಸಚ್ಚಿದಾನಂದ ಚಟ್ನಳ್ಳಿ*

--------------------+++-----------------------------------------
 14
ಯಾಕೆ ಎಲ್ಲಾ ಬಸವಧರ್ಮ ಪೀಠ ಸ್ವಾಮಿಗಳು ಸುಮ್ಮನಿದ್ದೀರಿ ನಿಮಗೂ ಕೂಡಲಸಂಗಮದೇವ ಬೇಕಾಯಿತಾ ಅಥವಾ
ಇಷ್ಟು ದಿನ ದೊಡ್ಡ ಮಾತಾಜಿ ಮುಂದೆ ನೀವು ಆಡಿದ್ದು ನಾಟಕನಾ ಬಸವದಳದ ಹಿರಿಯ ಶರಣರೇ ಎಲ್ಲಿದ್ದೀರಿ
ಯಾಕೆ ಸುಮ್ಮನೆ ಕುಳಿತುಕೊಂಡದ್ದೀರೀ

- ಶರಣಪ್ಪಾ ಬ್ಯಾಡರ್ಹಳ್ಳಿ

--------------------+++-----------------------------------------
13



- ಕಳ್ಳರಿಗು ಹಾಗೂ ಮೊಸಗಾರರಿಗು ಇನ್ನಷ್ಟು ಸಲಭವಾಯಿತು.


--------------------+++-----------------------------------------
12

ಇದು ಬಸವ ಧರ್ಮಪೀಠದ ನಿರ್ಣಯ ಅಲ್ಲವೇ ಅಲ್ಲ... ಇದು ಕೇವಲ ಇಬ್ಬರು ಪೂಜ್ಯರ ವೈಯಕ್ತಿಕ ನಿರ್ಣಯ... ಅವರು ಯಾವ ಒತ್ತಡಕ್ಕೆ ಮಣಿದು ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ... 
ಗಂಗಾ ಮಾತಾಜಿಯವರು ಕೂಡಲೇ ತಮ್ಮ ಈ ಹೇಳಿಕೆಯನ್ನು ಹಿಂಪಡೆಯಬೇಕು...  

ಪೂಜ್ಯ  ಲಿಂಗೈಕ್ಯ ಮಾತಾಜಿಯವರ ಆತ್ಮದಂತಿರುವ ಧರ್ಮಗ್ರಂಥದಲ್ಲೂ ಬದಲಾವಣೆ ಮಾಡುವ ಹುನ್ನಾರ ಎದ್ದು ಕಾಣುತ್ತಿದೆ..

- ಸಿದ್ಧವೀರ ಸಂಗಮದ

--------------------+++-----------------------------------------
11

ಇದೆಲ್ಲ ಈ ಸಮಯದಲ್ಲಿ ಹೇಳುವ ಅಗತ್ಯ ಇರಲಿಲ್ಲ.. ಎಲ್ಲಾ ಶರಣರ ಜೊತೆಗೆ ಚರ್ಚೆಯ ಮಾಡಬಹುದಾಗಿತ್ತು ಆದರೆ ಎಕಾಎಕಿಯಾಗಿ ಈ ನಿರ್ಣಯಕ್ಕೆ ಕಾರಣ ?? ಇದು ವಿಷಯ ಈ ಸಮಯದಲ್ಲಿ ತರೆಮಾಡುವ ಸೂಕ್ತ ಸಮಯ ಇಲ್ಲ ಹಲವರು ಚರ್ಚೆಗಳು ಶರಣರು ಮಾಡಲಾರಂಭಿಸಿದಾರೆ.
ಲಿಂಗದೇವ  ಸರಿ ಅಥವಾ  ತಪ್ಪು ಮಾಹಿತಿ ನೀಡಿದರೆ ಎಲ್ಲಾ ಶರಣರು ಸಹಕಾರ ಮಾಡಬಹುದಾಗಿತ್ತು .........ಆದೆರ ತಾವೇ ಲಿಂಗದೇನ ಬಗ್ಗೆ ಮನವರಿಕೆ ಮಾಡಲಾಗಿತ್ತು.. 

ಮುಂದಿನ ದಿನಗಳಲ್ಲಿ ಅನಿವಾರ್ಯ ಬಸವ ದರ್ಮದ ಪೀಠಕ್ಕೆ ಅನ್ಯಜಂಗಮ ಮೂರ್ತಿಗಳು ಬಂದು ಕಬಳಿಸುವ ಸಾಧ್ಯತೆ ಕಂಡು ಬರುತ್ತಿದ್ದ ಅನ್ನೋ ಚರ್ಚೆ ಸಾಮಜಿಕ ಜಾಲತಾಣದಲ್ಲಿ ಶುರುವಾಗಿ ...

- ಸಂಜು ಬುಕ್ಕಾ ಬೀದರ್

--------------------+++-----------------------------------------
 10

ಜೈನ ಸಮಾಜದಲ್ಲಿ *24 ತಿರ್ಥಂಕರ ನಂತರ ಯಾವುದೆ ತಿರ್ಥಂಕರ ಸೆರಪಡೆಇಲ್ಲಾ* ಅದೆರಿತಿ

ಜಯ ಬಸವರಾಜ ಭಕ್ತಜನ ಸುರುಭೊಜ ಜಯತು ಮಹಾಕಾರಣಿಕ ಲಿಂಗದೇವನ ಘನತೆಜ ಜಯತು ಕರುಣಾ ಸಿಂಧು ಭಕ್ತಜನ ಭಂಧು, ಜಯ ಇಷ್ಟದಾಯಕ ರಕ್ಷಿಸು ಶ್ರೀ ಗುರುಬಸವ ರಕ್ಷಿಸು, ಶ್ರೀ ಗುರುಬಸವ ರಕ್ಷಿಸು, 
ಜಯಗುರು ಬಸವೇಷ ಹರ ಹರ ಮಾಹದೇವ,
ವಿಶ್ವಗುರು ಬಸವೆಶ್ವರ ಮಾಹಾತ್ಮಾಕಿ ಜೈ.
(ಯಲ್ಲಾ ಆದಿಶರಣರೊಂದಿಗೆ)

*ಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಸ್ವಾಮಿಜಿಕಿ ಜೈ*.
*ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಕಿ ಜೈ.*
ಸಕಲ ಶರಣ ಸಂತೊಕಿ ಜೈ.

*ಇದರ ಮೊಂದೆ ಯಾವುದೆ ಹಸರು ಸೆರಿಸುವುದನ್ನು* ನಿಲ್ಲಿಸಿ

- ವಿಶ್ವನಾಥ ಕೋರೆ.

--------------------+++-----------------------------------------
9

*ಲಿಂಗದೇವನಲ್ಲಿರುವ ಸಿಹಿಯನ್ನು ಸವಿಯಲು ಅಸಮರ್ಥನಾದ ಕೂಡಲಸಂಗಮದೇವ*

ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅಹಂಕಾರವೆಂಬ ಸಿಗುರು
ಕಾಡಿತ್ತು ಕಾಣಾ, ಕೂಡಲಸಂಗಮದೇವಾ.

ಅಹಂಕಾರವೆಂಬ ಸಿಗುರು ಕಾಡಿತ್ತು ಕಾಣಾ ಲಿಂಗದೇವ ಎಂದು ಹೇಳುವ ಗುರು ಬಸವಣ್ಣನವರು ಮನೋಗತ ಇಂತಿದೆ:

ಕಬ್ಬಿನಲ್ಲೂ ಸಿಹಿ ಇದೆ. ಜೇನಿನಲ್ಲೂ ಸಿಹಿ ಇದೆ. ಕಬ್ಬಿನ ಮೇಲೆಯೇ ಜೇನುಗೂಡು ಕಟ್ಟಿದ್ದರೂ ಕಬ್ಬಿನ ಸಿಹಿ ಜೇನಿಗೆ ಗೊತ್ತಾಗುತ್ತಿಲ್ಲ. ಜೇನಿನ ಸಿಹಿ ಕಬ್ಬಿಗೆ ಗೊತ್ತಾಗುತ್ತಿಲ್ಲ. ಕಾರಣ ಅವೆರಡರ ಮಧ್ಯ ಇರುವ ಸಿಗುರು/ಸಿಪ್ಪೆ. 

ಲಿಂಗದೇವಾ ವಚನಾಂಕಿತ ಬೇಡ ಎನ್ನುವವರ ಹೃದಯದಲ್ಲಿಯೂ ಗುರು ಬಸವ ಭಕ್ತಿಯ ಸಿಹಿಯಿದೆ.

ಲಿಂಗದೇವ ಎನ್ನುವ ವಚನಾಂಕಿತ ಹೇಳಿ ಗುರು ಬಸವಣ್ಣನವರ ವಚನಗಳಿಗೆ ತಾತ್ವಿಕ ಮೆರಗು ಕೊಡುವವರ  ಹೃದಯದಲ್ಲೂ ಬಸವ ಭಕ್ತಿಯ ಅಪಾರವಾದ ಸಿಹಿಯಿದೆ. 

ಈ ಒಬ್ಬರ ಸಿಹಿಯನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳದಂತೆ ಮಾಡಿದುದು ಅಂಹಕಾರವೆಂಬ ಸಿಪ್ಪೆ.

ಲಿಂಗದೇವ ವಚನಾಂಕಿತ ಹೇಳುವುದನ್ನು ಬಿಟ್ಟರೆ ಮಾತ್ರ ನಾವು ನಿಮ್ಮ ಜೊತೆ ಸೇರುತ್ತೇವೆ ನಿಮ್ಮನ್ನು ನಮ್ಮ ಜೊತೆ ಸೇರಿಸಿಕೊಳ್ಳುತ್ತೇವೆ. ಲಿಂಗದೇವ ವಚನಾಂಕಿತ ಸಂಘಟನೆಗೆ ತೊಡಕಾಗಿದೆ ಎಂದು ಹೇಳುವವರ ಹೃದಯದಲ್ಲಿ ಇರುವುದು ಅಹಂಕಾರವೆಂಬ ಸಿಪ್ಪೆ ಮತ್ಸರವೆಂಬ ಸಿಗುರು.  ಎನ್ನುವುದು ಸ್ಪಷ್ಟವಾಗಿ ಗೋಚರಿಸಿದೆ. ನೆನಪಿರಲಿ ಅಹಂಕಾರ ಮನವನಿಂಬುಗೊಂಡ ಮನದಲ್ಲಿ ಲಿಂಗದೇವ ನೆಲೆಸಲು ಸಾಧ್ಯವಿಲ್ಲ ಇದು ಗುರುಬಸವ ವಾಣಿ

- ಅನಾಮಿಕ

--------------------+++-----------------------------------------

8

*ಪೂಜ್ಯ ಶ್ರೀ ಮನ್ ನಿರಂಜನ ಮಹಾಜಗದ್ಗುರು ಲಿಂ. ಡಾ. ಮಾತೆ ಮಹಾದೇವಿಯವರು ಯಾವ ಲಿಂಗದೇವ ಪದಕ್ಕಾಗಿ ಇಡೀ ಜೀವನ ಪರ್ಯಂತ ಕಷ್ಟಪಟ್ಟರೋ, ನೋವು ಪಟ್ಟರೋ ಹೇಳತೀರದು. ಆದರೆ ಅವರ ನಂತರ ಬಂದ ಗಂಗಾಮಾತಾಜಿಯವರು ಮಾತೆ ಮಹಾದೇವಿ ಅವರ ತತ್ವ ಸಿದ್ಧಾಂತಗಳನ್ನು ಉಳಿಸುವಲ್ಲಿ ವಿಫಲ.* 
ಅನರ್ಹತೆ ಮತ್ತು ಅಯೋಗ್ಯತನ ಇದಕ್ಕೆ ಮೂಲ ಕಾರಣ.
ಲಿಂ. ಮಾತೆಯವರ ಹಾಗೂ ಲಿಂಗಾನಂದ ಸ್ವಾಮೀಜಿಯವರ ಆಸೆ ಈಡೇರಿಸದ ಗಂಗಾ ಮಾತೆಯವರು ಪೀಠದಿಂದ ಕೆಳಗಿಳಿಯಲಿ.

ಕೆಲವು ಕುತಂತ್ರ ಸ್ವಾಮಿಗಳ ಹಾಗೂ ವಲಸೆ ಮುಖಂಡರ ಕುತಂತ್ರದಿಂದ ಬಸವ ಧರ್ಮ ಪೀಠದ ಹಿತಾಸಕ್ತಿ ಮತ್ತು ತತ್ವ ಸಿದ್ಧಾಂತಗಳ ವೈಫಲ್ಯ ಗೊಳಿಸಿದ ಗಂಗಾಮಾತೆ.

ಲಿಂ. ಮಾತೆ ಮಹಾದೇವಿ ತೀರಿಕೊಂಡ ಕೆಲವೇ ತಿಂಗಳಲ್ಲಿ ಗಂಗಾಮಾತಾಜಿಯವರು ಡಾಕ್ಟರೇಟ್ ಪದವಿ ಪಡೆದರು.

30 ಲಕ್ಷದ ಇನೋವಾ ಕ್ರಿಸ್ಟಾ ಕಾರ್ ಖರೀದಿಸಿ ಮೆರೆದರು.
ರಥಗಳ ಮೇಲೆ ಮೆರೆದರು.
ಲಿಂ. ಮಾತೆ ಮಹಾದೇವಿ ಅವರು ತೀರಿಕೊಂಡ ನೋವು ಗಂಗಾಮಾತೆಯವರಿಗೆ ಇರಲಿಲ್ಲ. ಒಳ್ಳೆದಾಯ್ತು ಅಂದ್ರು.

ಲಿಂಗದೇವ ವಿಷಯದಲ್ಲಿ ಏಕಗವಾಕ್ಷಿ ನಿರ್ಧಾರ ಕೈಗೊಂಡ ಗಂಗಾಮಾತಾಜಿಯವರು ಸರ್ವಾಧಿಕಾರಿ ಧೋರಣೆ ತೋರಿದ್ದಾರೆ.
ದಡ್ಡ ಮಹಾದೇಶ್ವರ ಸ್ವಾಮಿ, ಸಿದ್ರಾಮೇಶ್ವರ ಸ್ವಾಮಿ ಹಾಗೂ ಬ.ಧ.ಪೀಠದ ಬಗ್ಗೆ ಏನೂ ಅರಿವಿಲ್ಲದ ಇತ್ತೀಚಿನ ವಲಸೆ ಬಂದ ಹೊಸ ಮುಖಂಡರ ದರಿದ್ರತನದಿಂದ ಲಿಂಗದೇವ ಹಿಂಪಡೆದ ಗಂಗಾಮಾತೆ.

ಲಿಂ. ಮಾತಾಜಿಯವರ ಆಶೋತ್ತರ ಈಡೇರಿಸಲು ಅವರಂತೆ ಧೈರ್ಯ ಬೇಕು. ವಾಕ್ ಚಾತುರ್ಯ ಬೇಕು. ಯಾರಿಗೂ ಕೇಳಲ್ಲ, ಹೇಳಲ್ಲ. ಸರ್ವಾಧಿಕಾರಿ ಧೋರಣೆಯ ಗಂಗಾಮಾತಾಜಿಯವರು ಪೀಠದಿಂದ ಕೆಳಗಿಳಿಯಲಿ

- ಅನಾಮಿಕ 
------------------------------------------------------------
7

ಇದು ಗರುದ್ರೋಹ ಮಾತಾಜಿಯವರು ಲಿಂಗದವನ ವಿಷಯ ದಲ್ಲಿ ಎಷ್ಟೊಂದು ಕಷ್ಟಪಟ್ಟಿದ್ದಾರೆ ಎಂಬ ದು ತಮಗೆ ಗೊತ್ತಿಲ್ಲವೆ ತಮ್ಮಂತೆ ಊಸರವಳ್ಳಿ ಯಂತೆ ಬಣ್ಣ ಬದಲಾಯಿಸಿದರೆ ಜಗತ್ತಿನಲ್ಲಿ ಪ್ರಚಾರ ಪಡೆಯುತ್ತಿದ್ದರು ನೀವು ಒಂದು ಕ್ಷಣ ಪೀಠದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ ಬಸವ ಧರ್ಮ ಪೀಠ ಉಳಿಸಿ ಹೋರಾಟ ಅನಿವಾರ್ಯ ಹೇಳುವದು ಬಹಳವಿದೆ ಆದರೆ ತಮ್ಮ ಹೇಳಿಕೆಯನ್ನು ಕೇಳಿ ಎದೆಗೆ ಸಿಡಿಲು ಬಡಿದಂತಾಗಿದೆ ಈಗ ಹೇಳುವಂಥ ಸ್ಥಿತಿ ಯಲ್ಲಿಲ್ಲ

- ಮಲ್ಲಿಕಾರ್ಜುನ ತಾಮಸಂಗೆ ಬೆಂಗಳೂರು

-----------------------------------------------------------------
6

ರಾಷ್ಟ್ರೀಯ ಬಸವದಳ ಬೆಳಗಾವಿ ತಿವ್ರ ವಿರೊಧ, ಹಾಗು ಪರಮ ಪೂಜ್ಯ ಲಿಂ. ಡಾ|| ಮಾತೆ ಮಹಾದೇವಿ ನಿಡಿದ ಮಾರ್ಗದಲ್ಲಿಯೆ ಮುನ್ನಡೆಯತ್ತೆವೆ

-----+-------+---+-----+------+------

5

ಓಂ ಶ್ರೀಗುರು ಬಸವಲಿಂಗಾಯನಮಃ
ಬಸವ ಧರ್ಮ ಪೀಠದ ಅತ್ಯಂತ ಕಳಕಳಿಯುಳ್ಳ  ಭಕ್ತನಾದ ನಾನು,
 ಈ ಮೂಲಕ ನನ್ನ ಕಳಕಳಿಯ ಮನವಿಯನ್ನು ಬಸವ ಧರ್ಮ ಪೀಠಕ್ಕೆ ಸಲ್ಲಿಸುತ್ತಿದ್ದೇನೆ            ಪರಮಪೂಜ್ಯ  ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮದೇವ ವಚನಾಂಕಿತ ವನ್ನು ಬಳಸಬೇಕೆಂದು ಆದೇಶ ಮಾಡಿದ್ದಾರೆ. ಈ ಆದೇಶ ಪಾಲನೆ ಮಾಡುವಲ್ಲಿ ಪರಮಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಆದೇಶದ ಉಲ್ಲಂಘನೆಯಾಗುತ್ತದೆ ಹಾಗೂ ಗುರುದ್ರೋಹ ಮಾಡಿದಂತಾಗುತ್ತದೆ. ವಚನಾಂಕಿತ ವಿಷಯದಲ್ಲಿ ನಾವು ಪರಮಪೂಜ್ಯ ಮಾತೆ ಮಹಾದೇವಿಯವರ ಆಜ್ಞೆಯನ್ಮೇ ಪಾಲಿಸುತ್ತೇವೆ.  ಪೂಜ್ಯ ಗಂಗಾ ಮಾತಾಜಿಯವರ ಈ ಆದೇಶವನ್ನು, ಭಕ್ತಿ ಹಾಗು ಕಳಕಳಿಯಿಂದ ತಿರಸ್ಕರಿಸುತ್ತೇವೆ.
   ಶರಣು ಶರಣಾರ್ಥಿ.  🙏🙏🙏

- Veeranna Kornalli

-------------+++--------++-----
4

*ಬಸವ ಭಕ್ತರಿಗೆ ಬೇಕಾಗಿರುವುದು ಒಂದೇ ವಚನಾಂಕಿತವಲ್ಲ ಎರಡು ವಚನಾಂಕಿತ ಹೇಳುವವರ ಮಧ್ಯೆ  ಸಾಮರಸ್ಯ.*
-ಸಚ್ಚಿದಾನಂದ ಚಟ್ನಳ್ಳಿ

 ಲಿಂಗದೇವ ಎನ್ನುವ ತಾತ್ವಿಕ ಹಿನ್ನೆಲೆಯುಳ್ಳ ಪದವನ್ನು ವಚನಾಂಕಿತವಾಗಿ ಅಳವಡಿಸಿ ಎರಡುವರೆ ದಶಕಗಳೇ(1/4 ಶತಮಾನ) ಕಳೆದಿವೆ. 25 ವರ್ಷಗಳ ಅವಧಿಯಲ್ಲಿ ಲಿಂಗದೇವ ವಚನಾಂಕಿತವಾಗಿ ಮತ್ತು ಲಿಂಗಾಯತ ಧರ್ಮದ ದೇವರ ಹೆಸರಾಗಿ  ಹೃದಯ ಮನೋಭಾವಗಳಲ್ಲಿ ನೆಲೆಗೊಂಡಿದೆ. ಹೀಗಾಗಿ ಇಂದು ಬಸವ ಭಕ್ತರಿಗೆ ಬೇಕಾಗಿರುವುದು ಕೂಡಲಸಂಗಮದೇವ ಎನ್ನುವ ಒಂದೇ ವಚನಾಂಕಿತವಲ್ಲ. ಬದಲಿಗೆ, *ಲಿಂಗದೇವ ವನ್ನು ಹೇಳಬೇಕು* ಮತ್ತು *ಕೂಡಲಸಂಗಮದೇವ ಎಂದೇ ಹೇಳಬೇಕು*  ಎನ್ನುವವರ ಮಧ್ಯೆ *ಸಾಮರಸ್ಯದ ಭಕ್ತಿ, ಬದುಕು ಮತ್ತು ಲಿಂಗಾಯತ ಧರ್ಮಕ್ಕಾಗಿ ಏಕತೆಯ ಹೋರಾಟ.* ಅಷ್ಟಕ್ಕೂ ಲಿಂಗದೇವಾ ಎನ್ನುವುದನ್ನು ಕೇಳಿಸಿಕೊಂಡರೆ ಕಿವಿ ಅಪವಿತ್ರವಾಗುವದಾಗಲೀ ಅಥವಾ ಒಡೆದು ಹೋಗುವುದಾಗಲೀ ಆಗುವದಿಲ್ಲವಲ್ಲ!!
 *ಅದು ಲಿಂಗಾಯತ ಧರ್ಮದಲ್ಲಿ ದೇವರಿಗೆ ಕರೆದಿರುವ ಪರಮ ಪವಿತ್ರವಾದ ಪದ*

-----+++++++-------------------

3

*ಕರಾಳ ದಿನ*

ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿ ಅವರು ಬೆಳೆಸಿರುವ ತತ್ವನಿಷ್ಟರ ಪಡೆಯನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲು ತೊಡಕಾಗಿದ್ದ ಲಿಂಗದೇವ ನನ್ನು ತಮ್ಮ ದಾರಿಯಿಂದ  ತೆಗೆದುಹಾಕಲು   ಯಶಸ್ವಿಯಾದರು ಈ ಸ್ವಾರ್ಥಿಗಳು.. 

ಕುತಂತ್ರಿಗಳ ಈ ಸ್ವಾರ್ಥಕ್ಕೆ ಬಲಿಯಾದರು ಗಂಗಾ ಮಾತಾಜಿ... *ಗುರುದ್ರೋಹ* ಕ್ಕೆ ಒಳಗಾದರು..

ಸ್ವತಂತ್ರ ಲಿಂಗಾಯತ ಹೋರಾಟಕ್ಕೂ  ಮತ್ತು ಲಿಂಗದೇವ ವಚನಾಂಕಿತಕ್ಕೂ ಯಾವುದೇ ಸಂಬಂಧವಿಲ್ಲ.. ಇದು ಕೇವಲ ನೆಪ ಮಾತ್ರ...

ಗಂಗಾ ಮಾತಾಜಿಯವರ ಈ (ಮಾಡಿಸಿದ) ನಿರ್ಣಯವನ್ನು ರಾಷ್ಟ್ರೀಯ ಬಸವದಳದ ನಿಜ ಶರಣರು ಒಪ್ಪುವುದಿಲ್ಲ.. 

ಗಂಗಾ ಮಾತಾಜಿ ಅವರ ಆದೇಶಗಿಂತ ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರ ಆದೇಶವೇ ನಮಗೆ ಶ್ರೇಷ್ಠ..

*ಪ್ರಾಣ ಬಿಟ್ಟೆವು... ತತ್ವನಿಷ್ಠೆ ಬಿಡೆವು.. ಲಿಂಗದೇವ ಬಿಡೆವು...*

- ಸಿಧವೀರ ಸಂಗಮದ್

----------------++-----------

2

ಓಂ ಶ್ರೀಗುರು ಬಸವಲಿಂಗಾಯನಮಃ
ಬಸವ ಧರ್ಮ ಪೀಠದ ಅತ್ಯಂತ ಕಳಕಳಿಯುಳ್ಳ  ಭಕ್ತನಾದ ನಾನು,
 ಈ ಮೂಲಕ ನನ್ನ ಕಳಕಳಿಯ ಮನವಿಯನ್ನು ಬಸವ ಧರ್ಮ ಪೀಠಕ್ಕೆ ಸಲ್ಲಿಸುತ್ತಿದ್ದೇನೆ ಪರಮಪೂಜ್ಯ  ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮದೇವ ವಚನಾಂಕಿತ ವನ್ನು ಬಳಸಬೇಕೆಂದು ಆದೇಶ ಮಾಡಿದ್ದಾರೆ. ಈ ಆದೇಶ ಪಾಲನೆ ಮಾಡುವಲ್ಲಿ ಪರಮಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಆದೇಶದ ಉಲ್ಲಂಘನೆಯಾಗುತ್ತದೆ ಹಾಗೂ ಗುರುದ್ರೋಹ ಮಾಡಿದಂತಾಗುತ್ತದೆ. ವಚನಾಂಕಿತ ವಿಷಯದಲ್ಲಿ ನಾವು ಪರಮಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಆಜ್ಞೆಯನ್ಮೇ ಪಾಲಿಸುತ್ತೇವೆ.  ಪೂಜ್ಯ ಗಂಗಾ ಮಾತಾಜಿಯವರ ಈ ಆದೇಶವನ್ನು, ಭಕ್ತಿ ಹಾಗು ಕಳಕಳಿಯಿಂದ ತಿರಸ್ಕರಿಸುತ್ತೇವೆ.
   ಶರಣು ಶರಣಾರ್ಥಿ.  🙏🙏🙏

- ಚಂದ್ರಮೌಳಿ ಲಿಂಗಾಯತ

-------++++++-------------+---

1

*ಲಿಂಗದೇವನಲ್ಲಿರುವ ಸಿಹಿಯನ್ನು ಸವಿಯಲು ಅಸಮರ್ಥನಾದ ಕೂಡಲಸಂಗಮದೇವ*

ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅಹಂಕಾರವೆಂಬ ಸಿಗುರು
ಕಾಡಿತ್ತು ಕಾಣಾ, ಕೂಡಲಸಂಗಮದೇವಾ.

ಅಹಂಕಾರವೆಂಬ ಸಿಗುರು ಕಾಡಿತ್ತು ಕಾಣಾ ಲಿಂಗದೇವ ಎಂದು ಹೇಳುವ ಗುರು ಬಸವಣ್ಣನವರು ಮನೋಗತ ಇಂತಿದೆ:

ಕಬ್ಬಿನಲ್ಲೂ ಸಿಹಿ ಇದೆ. ಜೇನಿನಲ್ಲೂ ಸಿಹಿ ಇದೆ. ಕಬ್ಬಿನ ಮೇಲೆಯೇ ಜೇನುಗೂಡು ಕಟ್ಟಿದ್ದರೂ ಕಬ್ಬಿನ ಸಿಹಿ ಜೇನಿಗೆ ಗೊತ್ತಾಗುತ್ತಿಲ್ಲ. ಜೇನಿನ ಸಿಹಿ ಕಬ್ಬಿಗೆ ಗೊತ್ತಾಗುತ್ತಿಲ್ಲ. ಕಾರಣ ಅವೆರಡರ ಮಧ್ಯ ಇರುವ ಸಿಗುರು/ಸಿಪ್ಪೆ. 

ಲಿಂಗದೇವಾ ವಚನಾಂಕಿತ ಬೇಡ ಎನ್ನುವವರ ಹೃದಯದಲ್ಲಿಯೂ ಗುರು ಬಸವ ಭಕ್ತಿಯ ಸಿಹಿಯಿದೆ.

ಲಿಂಗದೇವ ಎನ್ನುವ ವಚನಾಂಕಿತ ಹೇಳಿ ಗುರು ಬಸವಣ್ಣನವರ ವಚನಗಳಿಗೆ ತಾತ್ವಿಕ ಮೆರಗು ಕೊಡುವವರ  ಹೃದಯದಲ್ಲೂ ಬಸವ ಭಕ್ತಿಯ ಅಪಾರವಾದ ಸಿಹಿಯಿದೆ. 

ಈ ಒಬ್ಬರ ಸಿಹಿಯನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳದಂತೆ ಮಾಡಿದುದು ಅಂಹಕಾರವೆಂಬ ಸಿಪ್ಪೆ.

ಲಿಂಗದೇವ ವಚನಾಂಕಿತ ಹೇಳುವುದನ್ನು ಬಿಟ್ಟರೆ ಮಾತ್ರ ನಾವು ನಿಮ್ಮ ಜೊತೆ ಸೇರುತ್ತೇವೆ ನಿಮ್ಮನ್ನು ನಮ್ಮ ಜೊತೆ ಸೇರಿಸಿಕೊಳ್ಳುತ್ತೇವೆ. ಲಿಂಗದೇವ ವಚನಾಂಕಿತ ಸಂಘಟನೆಗೆ ತೊಡಕಾಗಿದೆ ಎಂದು ಹೇಳುವವರ ಹೃದಯದಲ್ಲಿ ಇರುವುದು ಅಹಂಕಾರವೆಂಬ ಸಿಪ್ಪೆ ಮತ್ಸರವೆಂಬ ಸಿಗುರು.  ಎನ್ನುವುದು ಸ್ಪಷ್ಟವಾಗಿ ಗೋಚರಿಸಿದೆ. ನೆನಪಿರಲಿ ಅಹಂಕಾರ ಮನವನಿಂಬುಗೊಂಡ ಮನದಲ್ಲಿ ಲಿಂಗದೇವ ನೆಲೆಸಲು ಸಾಧ್ಯವಿಲ್ಲ ಇದು ಗುರುಬಸವ ವಾಣಿ

- ಅನಾಮಿಕ

-----------.......................




Comments

Popular posts from this blog

ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ

ಕಲ್ಯಾಣದಲ್ಲಿ ಗುರು ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡ