ಕಲ್ಯಾಣದಲ್ಲಿ ಗುರು ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡ

ಕಲ್ಯಾಣದಲ್ಲಿ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡನ್ನು ರುದ್ರಮುನಿ ಗವಿ ಬಸವಕಲ್ಯಾಣದ ಹತ್ತಿರ ಹಾಕಿದ್ದಾರೆ...ಬಸವರಾಜ ಸೇಡಂ  ಅವರು ಅದಕ್ಕೆ ಬೇಲೂರಿನ ಶಿವಕುಮಾರ ಶ್ರೀಗಳು ಸ್ಪಷ್ಟೀಕರಣ ಕೇಳಿದ್ದಾರೆ ಮತ್ತು ಬೋರ್ಡ್ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ.


ಇಂಥ ತಪ್ಪು ಮಾಹಿತಿಯ ಬೊರ್ಡನ್ನು ಖಂಡಿಸುತ್ತಾ ಶರಣರು ಸಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

-------------------------------------------------------------------------

ವಿಶ್ವಾರಾಧ್ಯ ಸತ್ಯಂಪೇಟೆ,ಬಸವಮಾರ್ಗ ಪ್ರತಿಷ್ಠಾನ

ಎಂಥ ಬೋಗಸ್ ಬೋರ್ಡ್ !?

ಈ ವೀರಶೈವವಾದಿಗಳಿಂದ ಎಂಥೆಂಥ ವಿವೇಕರಹಿತವಾದ ವಿಚಾರ ತಿಳಿದುಕೊಳ್ಳಬೇಕಾಗಿದೆಯಲ್ಲ ! ಎಂದು ಮನಸ್ಸಿಗೆ ತುಂಬಾ ನೋವಾಗುತ್ತದೆ. ವಚನ ಸಾಹಿತ್ಯ ,ಶಾಸನಗಳು, ಹಲವಾರು ಆಕರ ಗ್ರಂಥಗಳ ಉಲ್ಲೇಖಗಳೆ ತಿಳಿಸುವಂತೆ ಘನಲಿಂಗ ರುದ್ರಮುನಿ ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದುಕೊಂಡವರು.

ದುರಂತ ಎಂಥದ್ದೆಂದರೆ ಇಲ್ಲಿ ಬಸವಣ್ಣನವರ ಪತ್ನಿ , ಗಂಗಾಂಬಿಕೆ ತಾಯಿಯೂ ಸಹ ಈ ಘನಲಿಂಗ ರುದ್ರಮುನಿಯಿಂದ ದೀಕ್ಷೆ ಪಡೆದಳಂತೆ ! ಛೇ ಇಂಥ ಮತಿಗೆಟ್ಟವರಿಂದ ರುದ್ರಮುನಿ ಶರಣರಿಗೆ ಅವಮಾನವಲ್ಲವೆ ? ತಾಯಿಯ ಉದರದಿಂದ ಪಿಂಡ ಹೊರತೆಗೆದು ಮಣ್ಣಿನಲ್ಲಿಟ್ಟರೆ ಅದು ಜೀವಂತವಾಗಿದ್ದು ಬೆಳೆಯಬಲ್ಲುದೆ ?

ಸೌಂದರ್ಯ ದೇವಿಯ ಹೊಟ್ಟೆಯಲ್ಲಿರುವ ಪಿಂಡವನ್ನು ಹೊರ ತೆಗೆದು, ಅದನ್ನು ಮಣ್ಣಿನಲ್ಲಿ ಹೂತಿಟ್ಟ ಮೇಲೆ ಘನಲಿಂಗ ರುದ್ರಮುನಿಗಳು ಜನಿಸಿದರಂತೆ.

*ಇಂತಹ ಕಪೋಲ ಕಲ್ಪಿತ ಕಥೆ ಕಟ್ಟಿ ಲಿಂಗಾಯತರ ತಲೆ ಬೋಳಿಸುವ ಕೆಲಸ ಇನ್ನಾದರೂ ನಿಲ್ಲಿಸಿರಿ. ಇಲ್ಲದಿದ್ದರೆ ಪ್ರಜ್ಞಾವಂತ ಲಿಂಗಾಯತರು ನಿಮ್ಮನ್ನು ಕಲ್ಯಾಣದ ಬೀದಿ ಬೀದಿಯಲ್ಲಿ ಬೆನ್ನುಹತ್ತಿ ಬಾರಿಸುವ ದಿನಗಳು ದೂರವಿಲ್ಲ ,ಅಲ್ಲವೆ*

----------------------------------------------------------------------


Comments

Popular posts from this blog

ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ

ಗಂಗಾ ಮಾತಾಜಿ ವಿವಾದಾತ್ಮಕ ಹೆಳಿಕೆ