ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ

 ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ


ಕೊಡಲಸಂಗಮದಲ್ಲಿ 2023, ಜನೆವರಿ ಯಲ್ಲಿ ನಡೆಯುತ್ತಿರು ಎರಡು ಶರಣಮೇಳದಲ್ಲಿ ಬಂದ ಶರಣರನ್ನು ಉದ್ದೇಶಿಸಿ ಮಾತನಾಡುತ್ತಾ.. ಪ್ರಸಾದ ಇಲ್ಲಿ ಮಾಡುತ್ತಾರೆ ಅಲ್ಲಿ ಕಾರ್ಯಕ್ರಮ ಭಾಗಿಯಾಗುತ್ತಾರೆ ಎಂಬ ಬಸವರಾಜ ಧನ್ನೊರ ಅವರ ಕೆಳಮಟ್ಟದ ಮಾತುಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. 

ಬಸವಾನುಯಾಯಿಗಳು ಕೊಡಲಸಂಗಮದಲ್ಲಿ ಹಣ ಕೊಟ್ಟು ರೊಂಮಗಳನ್ನು ಕಟ್ಟಿಸಿಕೊಂಡವರಲ್ಲಿ ಕೆಲವರಿಗೆ ರೊಂಮ ಬೀಗಳನ್ನು ಕೊಡದೆ  ಅಮಾನವಿಯವಾಗಿ ವರ್ತಿಸಿದ್ದಾರೆ - ಇಂಥಹ ಘಟನೆಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ.

ಪವಿತ್ರವಾದ ಶರಣಮೇಳದ ವೇದಿಕೆ, ಅವಹೆಳನಕಾರಿ ಮಾತುಗಳಿಂದ, ಟಿಕೆಗಳಿಂದ ತುಂಬಿರುವುದನ್ನು ಕಂಡು ಬಸವಾನುಯಾಯಿಗಳು ನೊಂದಿದ್ದಾರೆ . ಪವಿತ್ರವಾದ ವೇದಿಕೆ ಧರ್ಮಪ್ರಚಾರಕ್ಕೆ ಮಾತ್ರ ಉಪಯೊಗಿಸಿಕೊಳ್ಳಿ.


ಪೂಜ್ಯ ಚನ್ನಬಸವಾನಂದ ಸ್ಮಾಮಿಜಿಯರ ಸ್ಪಷ್ಟಿಕರಣ





Comments

  1. This comment has been removed by the author.

    ReplyDelete
  2. ನಾಲಿಗೆಗೆ ಸಂಸ್ಕಾರವಿಲ್ಲ ಮಾತನಾಡಿದೆ ಆದರೆ ೩೦ವರ್ಷದಿಂದ ಲಿಂ. ಮಾತಾಜಿಯವರಿಂದ ಸಂಸ್ಕಾರ ಪಡೆದವರು. ೪೦ ವರ್ಷದಿಂದ ಲಿಂ.ಮಾತಾಜಿಯವರ ಒಡನಾಡಿಯಾಗಿದ್ದವರು ಇಂಥ ಮಾತುಗಳನ್ನು ಕೇಳಿ ಸಭೆಯಲ್ಲಿ ಪ್ರತಿಭಟಿಸದೇ ಮೌನವಾಗಿದ್ದುದು ಬಹು ದೊಡ್ಡ ದುರಂತ..!

    - ಸಚ್ಚಿದಾನಂದ

    ReplyDelete
  3. ದಾಸೋಹದ ವಿಷಯದಲ್ಲಿ ಈ ರೀತಿ *ಭೇದಭಾವ* ಮಾಡುವುದು ಸರಿಯಲ್ಲ ...

    ಪೂಜ್ಯ ಮಾತಾಜಿ ಯವರು 25 ವರ್ಷಗಳ ಕಾಲ *ಲಿಂಗದೇವ ವಚನಾಂಕಿತ* ಉಪಯೋಗಿಸಿ ಕಾಣಿಕೆ ಪಡೆದು ಕಟ್ಟಿದ ಸಂಸ್ಥೆ, ಪದವಿ, ಅಧಿಕಾರ ಇವರಿಗೆ ಬೇಕು... ಆದರೆ ಲಿಂಗದೇವ ಹೇಳುವ ಶರಣರು ಮಾತ್ರ ಬೇಡ...?
    ಇವರು ನಿಜವಾಗಿ ಸ್ವಾಭಿಮಾನಿ ಆಗಿದ್ರೆ ಕೂಡಲಸಂಗಮದೇವಾ ಉಪಯೋಗಿಸಿ ಒಂದು ಹೊಸ ಸಂಸ್ಥೆ ಈ ಲೆವೆಲ್ ಗೆ ಕಟ್ಟಿ ತೋರಿಸಬೇಕಿತ್ತು...

    ಮಾತಾಜಿ ಕೂಡಲಸಂಗಮದೇವ ಬಳಸುವವರನ್ನು ದಾಸೋಹದಲ್ಲಿ, ಪದವಿ ಕೊಡುವಲ್ಲಿ, ಯಾವ ವಿಷಯದಲ್ಲೂ ಭೇದಭಾವ ಮಾಡದೆ ವಿಶಾಲ ಹೃದಯ ತೋರಿಸಿ ತಪ್ಪು ಮಾಡಿದರೆಂದು ತಾವು prove ಮಾಡ್ತಾ ಇದ್ದೀರಿ...

    - ಸಿದ್ಧವೀರ

    ReplyDelete
  4. *ಪ್ರಸಾದ ಮಾಡಿರುವವರು ನಮ್ಮ ಶರಣರು...*

    *ಬಸವರಾಜ ಧನ್ನೊರ* ಶರಣರೆ.. ಪ್ರಸಾದ ಮಾಡಿರುವ *Charge ಎಷ್ಟಾಗಿದೆ par plateಗೆ*.. ದಯವಿಟ್ಟು ಹೇಳಿ..
    ನಾವು ನಿಮಗೆ ಹಣಕೊಡು ಪ್ರಯತ್ನ ಮಾಡುತ್ತೆವೆ.

    🙏🏼

    - ವಿಶ್ವನಾಥ ಕೋರೆ
    ರಾ. ಬ.ದಳ ಬೆಂಗಳೂರು

    ReplyDelete
  5. 👉 ಮಾದೇಶ್ವರ ಸ್ವಾಮೀಜಿಯವರೆ ತಾವು ಮಾತಾಡುವಾಗ "ಅವರು ಸ್ವಾಭಿಮಾನಿ ಶರಣ ಮೇಳವನ್ನು ಒಂದು ಕೋಳಿ ಫಾರಂ ಹತ್ತಿರ ಮಾಡ್ತಾ ಇದ್ದಾರೆ" ಎಂದು ತಾವು ಹೇಳಿರುವುದು, ತಮ್ಮ ಅಹಂಕಾರವನ್ನು ಎತ್ತಿ ತೋರಿಸುತ್ತದೆ.

    👉 ಪೂಜ್ಯ ಮಾತಾಜಿಯವರ ಬರೆದಿರುವ ಅಕ್ಕನ ಅಮರ ಗೀತೆ ಎಂಬ ಗ್ರಂಥದಿಂದ ಅವರ ಲೇಖನವನ್ನು ಕದ್ದು ನ್ಯೂಸ್ ಪೇಪರ್ ನಲ್ಲಿ ನಿಮ್ಮ ಹೆಸರು ಮತ್ತು ಫೋಟೋ ಬಳಸಿ ಲೇಖನ ಹಾಕಿಕೊಂಡಿದ್ದೀರಲ್ಲ. ಈ ಗೂರುದ್ರೋಹಕ್ಕಾಗಿ ಶರಣ ಮೇಳದಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದೀರಾ?

    👉 ನಿಜಗುಣ ಸ್ವಾಮಿಜಿ, ಅಕ್ಕ ಅಣ್ಣಪೂರ್ಣ ಇವರೆಲ್ಲ ಸಮಾಜದಲ್ಲಿ ಲಿಂಗದೇವ ಹೇಳುವ ಧೈರ್ಯ ಇಲ್ಲವೆಂದು ಬಸವ ಧರ್ಮಪೀಠವನ್ನು ತಾವಾಗಿಯೆ ಬಿಟ್ಟು ಹೋದವರು.
    ಆದರೆ ಚನ್ನಬಸವಾನಂದ ಸ್ವಾಮೀಜಿ, ಸತ್ಯದೇವಿ ಮಾತಾಜಿ ಇವರೆಲ್ಲರೂ ಸಂಸ್ಥೆಯನ್ನು ಬಿಟ್ಟು ಹೋದವರಲ್ಲ. ನೀವು ಮತ್ತು ಗಂಗಾ ಮಾತಾಜಿ ಸೇರಿ ಹೊರಗೆ ಹಾಕಿದ್ದು.

    👉 ಅವಾಗ ಕೂಡಲಸಂಗಮದೇವ ಹೇಳುವವರು ಪೀಠವನ್ನು ಬಿಟ್ಟು ಹೊರಗೆ ಹೋದರು.. ಆದರೆ ಇವಾಗ ಲಿಂಗದೇವ ಹೇಳೋರನ್ನೇ ನೀವು ಪೀಠದಿಂದ ಹೊರಕ್ಕೆ ಹಾಕ್ತಾ ಇದ್ದೀರಾ...

    👉 "ಪೂಜ್ಯ ಮಾತಾಜಿಯವರು ಮಾಡಿದ ತಪ್ಪನ್ನು ಗಂಗಾ ಮಾತಾಜಿಯವರು ಸರಿಪಡಿಸಿದರು" ಎಂದು ಸಮಾಜದಲ್ಲಿ ಬಿಂಬಿಸಿ ಪೂಜ್ಯ ಮಾತಾಜಿಯವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ, ಅವರನ್ನು ಅವಮಾನಿಸಿ,, ಅವರ ಸಾಹಿತ್ಯವನ್ನು ಬದಲಾಯಿಸಿ *ಗುರು ದ್ರೋಹ* ಮಾಡುತ್ತಿರುವವರು ಯಾರು ಎಂಬುದನ್ನು ಯೋಚಿಸಿ ನೋಡಿ...

    👉ಮಾದೇಶ್ವರ ಸ್ವಾಮೀಜಿ ಯವರೆ ಪೂಜ್ಯ ಮಾತಾಜಿ ಬರೆದು ಹೋಗಿರುವ ಧರ್ಮಗ್ರಂಥ ವಾನ್ನು ಎಲ್ಲಿ ಬಚ್ಚಿಟ್ಟಿದ್ದಿರಾ? 4 ವರ್ಷ ಆದ್ರು ಇನ್ನೂ ಪ್ರಿಂಟ್ ಮಾಡಿಲ್ಲ. ಮೊದಲು ಅದರ ಒರಿಜಿನಲ್ ಕಾಪಿ ಯನ್ನೂ ಭಕ್ತರ ಎದುರು ಬಹಿರಂಗಗೊಳಿಸಿ.... ಯಾರು ಗುರುದ್ರೋಹಿ ಅನ್ನೋದು ಆವಾಗ ಗೊತ್ತಾಗುತ್ತೆ....

    ಅದನ್ನು ಬಿಟ್ಟು ಯಾರಿಗೂ ಸಂಶಯ ಬರಬಾರದೆಂದು ಮಾತಾಜಿ ಯವರನ್ನು ಬರೀ ಹೊಗಳುವ ಲೇಖನಗಳನ್ನು ಬರೆಯುತ್ತ (ಬರೆಸುತ್ತ) ಭಕ್ತರನ್ನು ಮರಳು ಮಾಡಿ ಮಾತಾಜಿ ಅವರ ಸಾಹಿತ್ಯವನ್ನು ಕೊಲೆ ಮಾಡುತ್ತಿರುವ ಗೂರುದ್ರೋಹಿ ನೀವು...

    ReplyDelete
  6. ಅಕ್ಕ ಅನ್ನಪೂರ್ಣ ಹಾಗೂ ಗಂಗಾಂಬಿಕಾ ಎಷ್ಟು ಅನ್ಯೋನ್ಯವಾಗಿದ್ದಾರೆ ನೋಡು ಮೂದೇಶ್ವರ.‌
    ಬೆಂಕಿ ಕೆಂಡವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
    ಇವರಿಬ್ಬರೂ ಈ ರುದ್ರಾವತಾರ ತಾಳಲು ಕಾರಣ ಯಾರು ಗೊತ್ತಾ? ಈಗ ಬಸವ ಧರ್ಮ ಪೀಠಕ್ಕೆ ಒಕ್ಕರಿಸಿದ ಮಹಾನುಭಾವ

    - ಪ್ರಭು

    ReplyDelete
  7. ಆ ವ್ಯಕ್ತಿ ತನ್ನ ತಂದೆ ತಾಯಿಗೆ ಅನ್ನ ಹಾಕದೆ ಇರುವವನು ಇನ್ನ ಪ್ರಸಾದದ ಬಗ್ಗೆ ಅವನೇನು ಮಾತಾಡೋದು ಇದಕ್ಕೆ ಸಾಕ್ಷಿ ನನ್ನ ಹತ್ತಿರ ಇದೆ ಅವರ ತಂದೆ ಲಿಂಗೈಕ್ಯರಾದಗ ಬಾಬಾ ಬಾಬಾ ಅಂತ ಏನ್ ನಾಟಕ ಮಾಡಿದ್ದು ಅಂದ್ರೆ ಅಬ್ಬಾ ಅತಿ ಶೀಘ್ರದಲ್ಲೇ ಈ ವ್ಯಕ್ತಿ ಎಲ್ಲೆಲ್ಲಿ ಏನೇನು ಮಾಡಿದ್ದಾನೆ ಎಲ್ಲ ನಾಟಕಗಳು ಬಯಲು ಮಾಡುತ್ತೇನೆ.

    - ಸಂಗಮೆಷ ಅ

    ReplyDelete
  8. 😡😡 ಲೋಫರ್

    ReplyDelete
  9. ಸ್ವಾಮಿ ನೀವು ರೆಡಿಮೆಡ್ ಫುಡ್ ತಿನ್ನೋಕೆ ಬಂದಿರುವವರು,ಅಡುಗೆ ಮಾಡಿ ಊಟ ಮಾಡಿದ್ದರೆ ನಿನಗೆ ಅರ್ಥವಾಗುತಿತ್ತು ಅದರ ಕಷ್ಟ ಏನು ಅಂತ,ನಮ್ಮವ್ವ ಮಾತಾಜೀ ಎಲ್ಲಾ ತಯಾರು ಮಾಡಿಟ್ಟು ಹೋಗಿದಾಳೆ ನೀ ಉಣ್ಣುವುದಷ್ಟೇ ನಿನ್ನ ಕೆಲಸ, ಅದೂ ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡ್ತಿದಿಯಲಾ?ಏನ್ ಹೇಳಬೇಕು ನಿನ್ನ ಬುದ್ದಿಗೆ??ಕಷ್ಟ ಪಟ್ಟು ಸಂಸ್ಥೆ ಬೆಳೆಸೋ ತಾಕತ್ತು ಎಲ್ಲರಿಗೂ ಬರೋದಿಲ್ಲ, ನಿನಗಂತೂ ಮೊದಲೇ ಇಲ್ಲ.ಯೋಗ್ಯತೆ ಇಲ್ಲದವರಿಗೆ ಒಂದೊಂದು ಸಲ ಯೋಗ ಬರುತ್ತೆ ನಿನಗೆ ಈಗ ಬಂದಿದೆ,ಮೆರಿ....ಇನ್ನೋಂದು ಕಾಲ ಬರುತ್ತೆ ,ಯಾವುದೆಂದರೆ?ನಿನ್ನ ನಂಬಿರೋ ಇದೇ ಮುಗ್ದ ಜನರೇ ನಿನ್ನ ಪೀಠದಿಂದ ಹೊರ ಹಾಕೋ ಕಾಲ ಬರುತ್ತೆ.ನೆನಪಿರಲಿ..👍👍...ಆ ಬಸವ ತಂದೆ ಅನ್ಯಾಯಕ್ಕೆ ಎಂದು ಜಯವಾಗದಂತೆ ನೋಡಿಕೊಳ್ಳಲಿ . ಇದು ನೊಂದ ಶರಣರ ಬಿನ್ನಹ...🙏

    ಬಸವ ಜ್ಯೋತಿ

    ReplyDelete
  10. *ಬೆಳಗಾವಿ ಜಿಲ್ಲೆಯ ಶರಣರು ತರಕಾರಿ ಸೊಪ್ಪು, ಸಕ್ಕರೆ ಕೊಟ್ಟಿದ್ದಾರೆ, ಗಂಗಾ ವತಿಯ ನಾಗರಿಕರಿಂದ ಅಕ್ಕಿ ಬಂದಿವೆ, ಬೀದರ್ ಕಲಬುರಗಿ ಜಿಲ್ಲೆಯ ಶರಣರಿಂದ ತೊಗರಿ ಬೆಳೆ ಬಂದಿದೆ, ಕೆಲವು ಬಸವ ಭಕ್ತರ ಊರು, ಹಳ್ಳಿಗಳಿಂದ ರೊಟ್ಟಿ ಬಂದಿವೆ ಭಾರತದ ಕೆಲವು ರಾಜ್ಯಗಳಿಂದ ಸಾಕಷ್ಟು ಹಣ ಬಂದಿದೆ ನೀವು ಮತ್ತು ನಿಮ್ಮ ಪಟಾಲಂ ಸುಖ ನಿದ್ರೆ ಮಾಡಲು ಸಾಕಷ್ಟು ಶರಣರು ರೂಮ್ ಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ ನೀವು ಕಾರ್ಯಕ್ರಮ ಮಾಡಿರುವುದು ಜನತೆ ಕೊಟ್ಟ ದಾಸೋಹದಿಂದ ಹೊರತು ನಿಮ್ಮ ನಿಮ್ಮ ಮನೆಯ ಆಸ್ತಿಯಿಂದ ಖಂಡಿತವಾಗಿ ಅಲ್ಲ, ಇದನ್ನು ಅರಿತು ಮಾತಾಡಿದರೆ ಒಳಿತು ಇಲ್ಲದಿದ್ದರೆ ನೀವೇ ಏನೇನೋ ಹುಚ್ಚರ ತರ ಮಾತಾಡಿ ಜನರ ಎದುರಿಗೆ ನಗೆಪಾಟಲಿಗೆ ಗುರಿಯಾಗಿಬೇಡಿ ಎಂದು ವಿಷಾದ ಪೂರ್ವಕ ಎಚ್ಚರಿಸುತಿದ್ದೇವೆ*

    👍👍🙏🙏

    ReplyDelete
  11. ಪರಮ ಪೂಜ್ಯ ಅಪ್ಪಾಜಿ ಹಾಗೂ ಮಾತಾಜಿಯವರು ಶರಣರಿಂದ ಶರಣರಿಗಾಗಿ ಕಟ್ಟಿ ಬೆಳಸಿ, ಪೂಜ್ಯ ಮಾತಾಜಿ ಲಿಂಗೈಕ್ಯ ಆಗುವವರೆಗೆ ಶರಣರಿಂದ ಬಂದ ಕಾಣಿಕೆಯ ಒಂದೊಂದು ಚಿಲ್ಲರೆ ಕಾಸನ್ನು ಬಿಡದೆ, ಪ್ರತಿ ಶರಣಮೇಳ ನಡೆದ ನಂತರ ಅದನ್ನು ಎಣಿಸಿ ಬ್ಯಾಂಕ್ ಖಾತೆಗೆ ಜಮಮಾಡಿಸಿ ಸತ್ಯ ಶರಣರ ಕಾಯಕದಿಂದ ಬಂದ ಹಣವನ್ನು ಧರ್ಮ ದಾಸೋಹಕ್ಕೆ, ಜ್ಞಾನ ದಾಸೋಹಕಾಗಿ ದೇಶದ ಮೂಲೆ ಮೂಲೆಗಳಿಂದ ಬರುವ ಶರಣರ ಅನುಕೂಲಕ್ಕಾಗಿ ಬಳಸುತಿದ್ದರು. ಅಷ್ಟೇ ಅಲ್ಲದೆ ಬರುವ ಶರಣರಿಗೆ ತನು ದಾಸೋಹ (ಸೇವೆ )... ಪ್ರಸಾದ ನೀಡುವುದು, ಲಾಡು ಮಾಡುವುದು ಹೀಗೆ ಅನೇಕ ಸೇವೆಗೆ ಅವಕಾಶ ಕಲ್ಪಿಸಿ ಕೊಡುತ್ತಿದ್ದರು. ಆದರೆ ನೀವು ಛಿ... ಶರಣರ ಮನಸ್ಸುಗಳ ನಡುವೆ ಹುಳಿಹಿಂಡಿ, ನಿಸ್ವಾರ್ಥ ಶರಣರನ್ನು ನಂಬದೆ, ಹೊರಗಿನಿಂದ ಪ್ರಸಾದ ನೀಡಲ್ಲೂ ಜನರನ್ನು ಕರೆಸಿ, ಶರಣರ ಕಾಣಿಕೆಯನ್ನು ದುಂಡು ವೆಚ್ಚ ಮಾಡಿ, ಶರಣರಿಗೆ ಸೇವೆ ಮಾಡುವ ಅವಕಾಶವನ್ನು ಕಾಸಿದಿರುವ ತಮಗೆ ಶರಣರ ನೋವಿನ ತಾಪ ತಡವಾದರೂ ಸರಿ ತಟದೆ ಬಿಡದು.

    - ಮಂಗಳಾ ಬೆಂಗಳೂರು

    ReplyDelete
  12. ಓಂ ಶ್ರೀ ಗುರುಬಸವ ಲಿಂಗಾಯ ನಮಃ ಪೂಜೆ ಮಾದೇಶ್ವರ ಸ್ವಾಮೀಜಿ ಅವರ ಹೇಳಿಕೆಯನ್ನು ನೋಡಿ ನಮಗೆ ಬಹಳಷ್ಟು ನೋವಾಗುತ್ತಿದೆ , ತಾವುಗಳು ಒಂದು ಸನ್ಯಾಸಿ ಜೀವನವನ್ನು ನಡೆಸಿಕೊಂಡು ಕಾವಿ ಬಟ್ಟೆಗಳನ್ನು ಧರಿಸಿಕೊಂಡು ಹಗುರವಾಗಿ ಕೋಳಿ ಫಾರ್ಮಿನಲ್ಲಿ ಸ್ವಾಭಿಮಾನಿಗಳ ಶರಣ ಮೇಳವನ್ನು ಹಗುರವಾಗಿ ಹೇಳುತ್ತಾ ಇದ್ದೀರಿ ಸ್ವಾಮೀಜಿಯವರೇ ನೀವು ಮಾಡುವಂತ ಶರಣ ಮೇಳವನ್ನು ಅದು ಲಿಂಗದೇವನ ಸ್ವತ್ತು ಆ ಆಸ್ತಿಯಲ್ಲಿ ನೀವುಗಳು ಶರಣ ಮೇಳವನ್ನು ಮಾಡಿ ಅಟ್ಟಹಾಸ ಪಡುತ್ತಿದ್ದೀರಿ ಆದರೆ ತಾವುಗಳು ಆತ್ಮವಲೋಕನೆ ಮಾಡಿಕೊಳ್ಳಬೇಕು ಈ ಬಸವ ಧರ್ಮಪೀಠವನ್ನು ಯಾರು ತ್ಯಾಗ ಮಾಡಿದ ಫಲ ಇದೆ ಸ್ವಲ್ಪ ಆತ್ಮಾವಲೋಕನೆ ಮಾಡಿಕೊಂಡಾಗ ಮಾತ್ರ ತಮಗೆ ಗೊತ್ತಾಗುತ್ತದೆ ಸ್ವಾಮಿಗಳೇ ಏಕೆಂದರೆ ನಿಮಗೆ ಯಾವುದೇ ಕಷ್ಟಗಳು ಗೊತ್ತಿಲ್ಲ ಬೇಕಾದಷ್ಟು ಆಸ್ತಿಯನ್ನು ಮಾಡಿ ಲಿಂಗದೇವ ಎಂಬುವಂತ ಒಂದು ಪದವನ್ನು ಸಂಶೋಧನೆ ಮಾಡಿ ನಿಮ್ಮ ಕೈಯಲ್ಲಿ ಕೊಟ್ಟು ಧರ್ಮಪೀಠವನ್ನು ಕೂಡ ನಿಮ್ಮ ಕೈಯಲ್ಲಿ ಕೊಟ್ಟು ಲಿಂಗೈಕ್ಯ ಮಾತಾಜಿಯವರು ಮುನ್ನಡೆಸಿಕೊಂಡು ಹೋಗಿರಿ ಎಂದು ತಮ್ಮ ಕೊನೆಗಳಿಗೆ ಈ ಮಾತನ್ನು ಹೇಳಿದ್ದಾರೆ ಆಪ್ತ ಶಿಷ್ಯರಾದ ಗಂಗಾ ಮಾತಾಜಿಯವರಿಗೆ ಈ ಮಾತು ಗೊತ್ತಿದೆ ಆದರೂ ಕೂಡ ಗುರು ದ್ರೋಹ ಮಾಡಿ ಲಿಂಗದೇವನನ್ನು ಕೈ ಬಿಟ್ಟು ಧರ್ಮಪೀಠವನ್ನು ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ಬೆನ್ನಿಗೆ ಗುಂಡ ಶರಣ ಬಂದುಗಳನ್ನು ಹಾಗೂ ರಾಜಕೀಯ ವ್ಯಕ್ತಿಯ ಶರಣಬಂದುಗಳನ್ನು ಹಾಗೂ ಸನಾತನ ವಾದಿಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಪೂಜ್ಯ ಲಿಂಗೈಕ್ಯ ಮಾತಾಜಿ ಅವರ ಸಂಶೋಧನೆ ಮಾಡಿದಂತ ಲಿಂಗದೇವನನ್ನು ಬಿಟ್ಟು ಧರ್ಮಪೀಠದ ವೇದಿಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಂತ ಗಂಗಾ ಮಾತಾಜಿ ಅವರು ಗುರು ದ್ರೋಹಿಗಳು ಅಥವಾ ಲಿಂಗದೇವನನ್ನು ಬಿಟ್ಟು ಕೂಡಲಸಂಗಮದೇವ ಅನ್ನುವದಿಲ್ಲ ನಾವು ಲಿಂಗದೇವನ ಕಂದಗಳು ಎಂದು ಹೇಳಿಕೊಳ್ಳುವಂತ ಅಪ್ಪ ಚನ್ನಬಸವನಪ್ಪಾಜಿ ಅವರಿಗೆ ಧರ್ಮಪೀಠದಿಂದ ಉಚ್ಚಾಟನೆ ಮಾಡುವವರು ಗುರು ದ್ರೋಹಿಗಳು ಸ್ಪಷ್ಟವಾಗಿದೆ ಶರಣ ಬಂದುಗಳು ಯಾರು ದಡ್ಡರಲ್ಲ ಮಾದೇಶ್ವರ ಸ್ವಾಮೀಜಿಯವರೇ ನಮಗೆ ಕೋರ್ಟ್ ಗೊತ್ತಿಲ್ಲ ಅಂತ ಪದೇ ಪದೇ ಹೇಳುತ್ತಿದ್ದೀರಿ ಚನ್ನಬಸವನ ಸ್ವಾಮೀಜಿ ಅವರು ಕೋರ್ಟ್ ನಮಗೆ ತೋರಿಸಿದ್ದಾರೆ, ನಿಜವಾಗಿಯೂ ಕೂಡ ನಿಮಗೆ ಯಾವ ಕೋರ್ಟು ಗೊತ್ತಿಲ್ಲ ಯಾವ ಆಫೀಸು ಗೊತ್ತಿಲ್ಲ ಯಾವ ಭಾಷೆಯು ಬರುವುದಿಲ್ಲ ತಮ್ಮನ್ನು ತಾವೇ ಸತ್ಯವಾದಂತ ಮಾತುಗಳನ್ನು ಹೇಳಿಕೊಳ್ಳುತ್ತಿದ್ದೀರಿ ತಾವುಗಳು ಆತ್ಮವಲೋಕನೆ ಮಾಡಿಕೊಳ್ಳಿ ಕಾರಣವೇನೆಂದರೆ ಅಪ್ಪಾಜಿಯವರು ಯಾವ ಕಾರಣಕ್ಕಾಗಿ ಕೋರ್ಟಿಗೆ ಹೋಗಿದ್ದಾರೆ ಎಂಬುದನ್ನು ಯಾವ ಶರಣಬಂದುಗಳಿಗೆ ತಾವುಗಳನ್ನು ಹೇಳಿಕೊಳ್ಳುತ್ತಿರಲಿಲ್ಲ ನಾನು ಇಲ್ಲಿ ಹೇಳುತ್ತೇನೆ ಅಪ್ಪಾಜಿಯವರೇ ಅವರು ಕೋರ್ಟಿಗೆ ಹೋಗುವ ಕಾರಣವೇನೆಂದರೆ, ಲಿಂಗೈಕ್ಯ ಪೂಜೆ ಮಾತಾಜಿಯವರು ಸಂಶೋಧನೆ ಮಾಡಲ್ಪಟ್ಟಂತ ಲಿಂಗದೇವ ಪದವನ್ನು ಬದಲಾಯಿಸಿ ಕೂಡಲಸಂಗಮದೇವ ಎಂದು ಮಾಡಿದ್ದೀರಿ ಅದಕ್ಕೆ ನಾನು ಒಪ್ಪುವುದಿಲ್ಲ ಎಂದು ಚನ್ನಬಸವನಂದಪ್ಪಾಜಿಯವರು ಹೇಳಿದ ಕಾರಣ ಧರ್ಮಪೀಠಾಧ್ಯಕ್ಷರಾದಂತ ಪೂಜಾ ಗಂಗಾ ಮಾತಾಜಿಯವರನ್ನು ದೊಡ್ಡ ಒಂದು ನಿರ್ಣಯವನ್ನು ತೆಗೆದುಕೊಂಡು ಏಕ ಪಕ್ಷವಾಗಿ ನಿರ್ಣಯವನ್ನು ಮಾಡಿ ಲಿಂಗದೇವ ಅನ್ನುವಂತ ಸ್ವಾಮೀಜಿಗಳನ್ನು ನಾನು ಉಚ್ಚಾಟನೆ ಮಾಡುತ್ತೇನೆ ಅಂದರೆ ಚೆನ್ನಬಸವನಂದಪ್ಪಜಿ ಅವರಿಗೆ ಉಚ್ಛಾಟನೆ ಮಾಡಿರುತ್ತೇನೆ ಎಂದು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ ಆದ ಕಾರಣ ಚೆನ್ನಬಸವನಂದಪ್ಪಾಜಿ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ಕೇವಲ ಲಿಂಗದೇವನನ್ನು ಪದವನ್ನು ಬದಲಾಯಿಸಿ ಕೂಡಲಸಂಗಮದೇವ ಎಂದು ಮಾಡಿದ್ದೀರಿ ಸರಿಯಲ್ಲ ಮಾತಾಜಿಯವರೇ ಎಂದು ಪ್ರಶ್ನೆ ಮಾಡಿದ್ದಕ್ಕಾಗಿ ನನ್ನನ್ನು ಪೀಠದಿಂದ ಉಚ್ಚಾಟನೆ ಮಾಡಿದ್ದಿರಿ ಮಾತಾಜಿ ಅವರೇ ಆದ ನಂತರ ಸ್ವಾಮೀಜಿಯವರು ಕೋರ್ಟಿಗೆ ಹೋಗಿರುತ್ತಾರೆ ಅದನ್ನು ಹೇಳೋದು ಬಿಟ್ಟು ಕೇವಲ ಕೋರ್ಟ್ ಮೆಟ್ಟಲೇರಿದ್ದಾರೆ ಇದು ಸ್ವಾಮೀಜಿಗಳು ಮಾಡುವುದು ಸರಿಯೇ ಎಂದು ಪ್ರವಚನದ ಮುಖಾಂತರ ಶರಣಬಂದುಗಳ ಮನಸ್ಸನ್ನು ಬದಲಾವಣೆ ಮಾಡುತ್ತಿದ್ದೀರಿ ಇದು ನಿಮಗೆ ಸೋಬೆ ತರುವಂತ ಕೆಲಸ ಅಲ್ಲ ಸ್ವಾಮೀಜಿಯವರೇ ಚನ್ನಬಸವನಂದ ಅಪ್ಪಾಜಿ ಅವರಿಗೆ ಪೀಠದ ಮೋಹ ಇದ್ದರೆ ಸ್ವಾಭಿಮಾನಿ ಶರಣ ಮೇಳದಲ್ಲಿ ಪೀಠಾರೋಹಣ ಅವರೇ ಮಾಡಿಕೊಳ್ಳಬೇಕಾಗಿತ್ತು ಆದ ಕಾರಣ ಅವರಿಗೆ ಯಾವ ಪೀಠ ಮೋಹ ಇಲ್ಲ ಅವರಿಗೆ ಮಾತಾಜಿಯವರ ಸಂಶೋಧನೆ ಮಾಡಿದಂತಹ ಲಿಂಗದೇವನ ಮೋಹ ಇದೆ ಆದ ಕಾರಣ 14ನೇ ಸಂಕ್ರಾಂತಿ ದಿವಸ ವಚನ ಸಾಹಿತ್ಯವನ್ನೇ ಪೀಠ ರೋಹಣ ಮಾಡಲಾಯಿತು ಇದು ನೋಡಿ ತಾವುಗಳು ಇನ್ಮುಂದೆ ಆದರೂ ಪೀಠ ಹರೋಣ ಮಾಡಿಕೊಳ್ಳಲಾರದೆ ರಥದಲ್ಲಿ ಮೆರವಣಿಗೆ ಮಾಡಿಕೊಳ್ಳಲಾರದೆ ಕೇವಲ ವಚನ ಸಾಹಿತ್ಯವನ್ನೇ ಪೀಠ ಹಾರೋಹಣ ಮಾಡಬೇಕು ಇದು ಸ್ವಾಭಿಮಾನಿಗಳ ಶರಣ ಮೇಳದ ಮಾದರಿಯ ವಿಷಯಗಳು ಅದನ್ನು ಬಿಟ್ಟು ಹಗುರವಾಗಿ ಲಿಂಗದೇವನ ಆಸ್ತಿಯಲ್ಲಿದ್ದ ಧರ್ಮಪೀಠದ ಮೇಲೆ ಕುಂತು ಬಾಯಿಗೆ ಬಂದಂತೆ ನಿಮ್ಮಂತ ಡೋಂಗಿ ಜಂಗಮೂರ್ತಿಗಳು ಧರ್ಮಪೀಠವನ್ನು ಬಿಟ್ಟು ಎಲ್ಲಾದರೂ ವೀರಶೈಮಠಗಳಲ್ಲಿ ಸೇರಿಕೊಳ್ಳಬೇಕು ಸ್ವಾಮೀಜಿಯವರೇ, ಇನ್ನು ಮುಂದೆ ಹಗುರವಾಗಿ ಸ್ವಾಭಿಮಾನಿ ಶರಣ ಬಂಧುಗಳಿಗೆ ಹಗುರವಾಗಿ ಮಾತನಾಡಬಾರದು ಸ್ವಾಮೀಜಿಯವರೇ ಇತಿ ನಿಮ್ಮ ಬಸವರಾಜ್ ಪಾಟೀಲ್ ಲಿಂಗದಳ್ಳಿ ಶರಣು

    - Patil

    ReplyDelete
  13. https://youtu.be/8WZP7AjxoWg

    ReplyDelete

Post a Comment

Popular posts from this blog

ಗಂಗಾ ಮಾತಾಜಿ ವಿವಾದಾತ್ಮಕ ಹೆಳಿಕೆ

ಕಲ್ಯಾಣದಲ್ಲಿ ಗುರು ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡ